
ಉಡುಪಿ: ತಾಯಿ ಮಕ್ಕಳ ಅಮಾನುಷ ಕೊಲೆ ನಡೆದ ನೇಜಾರಿನ ಮನೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವಕ್ತಾರರು ಹಾಗೂ ಕೊಪ್ಪ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಸುಧೀರ್ ಕುಮಾರ್ ಮುರೊಳ್ಳಿ ಭೇಟಿ ನೀಡಿದರು. ಮನೆ ಯಜಮಾನ ನೂರ್ ಮುಹಮ್ಮದ್ ಹಾಗೂ ಅವರ ಪುತ್ರ ಅಸದ್ ಅವರನ್ನು ಸಂತೈಸಿ, ನಿಮ್ಮ ಜೊತೆ ನಾವಿದ್ದೇವೆ ಎಂದು ತಿಳಿಸಿ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ನಾಯಕರಾದ ಎಂ ಎಂ ಗಫೂರ್, ರಮೇಶ್ ಕಾಂಚನ್,ಗಣೇಶ್ ನೆರ್ಗಿ, ಲಕ್ಷ್ಮಣ್ ಪೂಜಾರಿ, ದೀಪಕ್ ಕೋಟ್ಯಾನ್, ಪ್ರಮಿಳಾ ಜತ್ತನ್ನ ಹಾಗೂ ಇನ್ನಿತರರು ಉಪಸ್ಥಿತರಿದ್ದರು.


