Visitors have accessed this post 304 times.
ಕಾಸರಗೋಡು: ಪೈಪ್ ಲೈನ್ ಅಳವಡಿಕೆಗೆ ಹೊಂಡ ತೋಡುತ್ತಿದ್ದಾಗ ಆವರಣ ಗೋಡೆ ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟ ದಾರುಣ ಘಟನೆ ಮಂಗಳವಾರ ಸಂಜೆ ನಗರದ ಮಾರ್ಕೆಟ್ ರಸ್ತೆಯಲ್ಲಿ ನಡೆದಿದೆ. ಇಬ್ಬರು ಗಾಯಗೊಂಡಿದ್ದಾರೆ.
ಕರ್ನಾಟಕ ಮೂಲದ ಲಕ್ಷ್ಮಪ್ಪ (೪೨) ಮತ್ತು ಬಿ. ಎಂ ಬಸಯ್ಯ ( ೪೦) ಮೃತಪಟ್ಟವರು. ಅವಶೇಷಗಳಡಿ ಸಿಲುಕಿದ್ದ ಇಬ್ಬರನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೈಪ್ ಲೈನ್ ಅಳವಡಿಕೆಗೆ ಹೊಂಡ ತೋಡುತ್ತಿದ್ದಾಗ ಬದಿಯಲ್ಲಿದ್ದ ಆವರಣ ಗೋಡೆ ಕುಸಿದು ಬಿದ್ದಿದ್ದು, ಅವಶೇಷಗಳಡಿ ಸಿಲುಕಿದ್ದ ಕಾರ್ಮಿಕರನ್ನು ಪರಿಸರವಾಸಿಗಳು ಹಾಗೂ ಪೊಲೀಸರು ಹೊರತೆಗೆದರು. ಆದರೆ ಇಬ್ಬರು ಮೃತಪಟ್ಟಿದ್ದರು. ಹೆಚ್ಚಿನ ಮಾಹಿತಿ ಲಭಿಸಿಲ್ಲ.