‘ಗುಂಡು ತಗುಲಿ ಸೀಮಾ ಹೈದರ್ ಪತಿ ಸಚಿನ್ ಮೀನಾ ಸಾವು’?

ವದೆಹಲಿ: ತನ್ನ 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಪಾಕ್​​​ ಮಹಿಳೆ ಸೀಮಾ ಹೈದರ್ ಹಾಗೂ ಭಾರತದ ಸಚಿನ್ ಮೀನಾ ಇಬ್ಬರೂ ಒಟ್ಟಿಗೆ ತುಂಬಾ ಸಂತೋಷವಾಗಿದ್ದರು. ಈ ನಡುವೆ ಸಚಿನ್ ಮೀನಾ ಬಗ್ಗೆ ಸುದ್ದಿಯೊಂದು ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ಹರಡುತ್ತಿದೆ. ಹೌದು, ಸಚಿನ್ ಹತ್ಯೆಯಾಗಿದೆ ಎಂದು ಜನ ಕಮೆಂಟ್ ಮಾಡುತ್ತಿದ್ದಾರೆ.

ಹೀಗಿರುವಾಗ ವೈರಲ್ ಆದ ಸುದ್ದಿಯ ಸತ್ಯಾಸತ್ಯತೆ ಇಲ್ಲಿದೆ.

ಸೀಮಾ ಹೈದರ್ ಮತ್ತು ಸಚಿನ್ ಮೀನಾ ದಂಪತಿ ಒಂದಲ್ಲಾ ಒಂದು ಕಾರಣಕ್ಕಾಗಿ ಸುದ್ದಿಯಲ್ಲಿರುತ್ತಾರೆ. ಆದರೆ, ಇದೀಗ ಸಚಿನ್ ಮೀನಾ ಅವರನ್ನು ಯಾರೋ ಅಪರಿಚಿತ ಗುಂಡಿಕ್ಕಿ ಕೊಂದಿರುವ ವಿಡಿಯೋ ಒಂದು ಎಲ್ಲೆಡೆ ವೈರಲ್ ಆಗಿದೆ.

ಹೌದು, ಸೀಮಾ ಹೈದರ್ ಮತ್ತು ಸಚಿನ್ ಮೀನಾ ಕಳೆದ ಕೆಲವು ದಿನಗಳಿಂದ ಮತ್ತೆ ಸುದ್ದಿಯಲ್ಲಿದ್ದಾರೆ. ಸೀಮಾಳ ಗಂಡ ಸಚಿನ್ ರವರ ಕೊಲೆಯಾಗಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಸಚಿನ್ ಅವರನ್ನು ಯಾರೋ ಅಪರಿಚಿತ ಗುಂಡಿಕ್ಕಿ ಕೊಂದಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದಕ್ಕೂ ಮೊದಲು ಸೀಮಾ ಪಾಕಿಸ್ತಾನಿ ಪತ್ತೇದಾರಿ ಏಜೆಂಟ್ ಎಂಬ ಗಾಳಿಮಾತಿತ್ತು ಎಂಬುದನ್ನು ನಾವಿಲ್ಲಿ ಗಮನಿಸಬೇಕು.

ವಿಡಿಯೋದಲ್ಲಿ ಏನಿದೆ?
ಹಾಗಾದರೆ, ಸಚಿನ್ ಮೀನಾ ಕೊಲೆ ಸುದ್ದಿ ನಿಜವೋ, ಸುಳ್ಳೋ? ಈ ಪ್ರಕರಣದ ಹಿಂದಿನ ರಹಸ್ಯವೇನು… ಸಚಿನ್ ಮೀನಾ ಅವರನ್ನು ಯಾರೋ ಅಪರಿಚಿತ ಗುಂಡಿಕ್ಕಿ ಕೊಲ್ಲುತ್ತಿರುವ ಮತ್ತು ಸೀಮಾ ಅಳುತ್ತಿರುವ ದೃಶ್ಯಾವಳಿಗಳು ವಿಡಿಯೋದಲ್ಲಿ ಇದೆ.

ಫೇಸ್ ಬುಕ್ ನಲ್ಲಿ ವೈರಲ್ ಆಯ್ತು ಕೊಲೆ ವಿಡಿಯೋ
ಸಚಿನ್ ವಿಡಿಯೋ ಹಲವಾರು ಪ್ರಶ್ನೆಗಳಿಗೆ ದಾರಿಮಾಡಿಕೊಟ್ಟಿದೆ. ಫೇಸ್ ಬುಕ್ ನಲ್ಲಿ ಬಿಡುಗಡೆಗೊಂಡ ವಿಡಿಯೋ ಕ್ಯಾಪ್ಷನ್ ಸಹ ಜನರಲ್ಲಿ ಕುತೂಹಲವನ್ನು ಕೆರಳಿಸಿದೆ. ‘Someone killed Seema Haider’s Husband Sachin’ ಎಂಬ ಕ್ಯಾಪ್ಷನ್ ಮತ್ತು ಈ ಕುರಿತಾಗಿ ಪೊಲೀಸ್ ಅಧಿಕಾರಿಯೊಬ್ಬರ ಹೇಳಿಕೆಯೂ ಕೂಡ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಡಿಯೋ ಅಸಲಿಯತ್ತೇನು?
ಅಷ್ಟಕ್ಕೂ ಈ ವಿಡಿಯೋನ ನಿಜವಾದ ರಹಸ್ಯ ಇಲ್ಲಿದೆ. ಸೀಮಾಳ ಗಂಡ ಸಚಿನ್ ಜೀವಂತವಾಗಿದ್ದು, ಆ ಕೊಲೆ ಫೇಕ್ ಎಂದು ಮೂಲಗಳು ತಿಳಿಸಿವೆ. 20 ಗಂಟೆಗಳ ಹಿಂದೆ ವಿಡಿಯೋ ಹಂಚಿಕೊಳ್ಳಲಾಗಿದ್ದು, ಇಲ್ಲಿಯವರೆಗೆ 7 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ಈ ವಿಡಿಯೋ ಸಂಪೂರ್ಣ ಫೇಕ್. ಇದು ನಡೆದಿಲ್ಲ ಎಂಬುದು ಇದೀಗ ಬೆಳಕಿಗೆ ಬಂದಿದೆ. ಸಚಿನ್ ಮೀನಾ ಸಂಪೂರ್ಣ ಸುರಕ್ಷಿತವಾಗಿದ್ದು ಮನೆಯಲ್ಲಿದ್ದಾರೆ. ಯಾವುದೇ ಸುದ್ದಿ ವಾಹಿನಿಯಾಗಲಿ, ಮಾಧ್ಯಮವಾಗಲಿ ಈ ಸುದ್ದಿಯನ್ನು ಪ್ರಸಾರ ಮಾಡಿಲ್ಲ. ಜನರನ್ನು ದಾರಿತಪ್ಪಿಸಲು ಇಂತಹ ದಾರಿ ತಪ್ಪಿಸುವ ವಿಡಿಯೋಗಳನ್ನು ಮಾಡಲಾಗಿದೆ.

Leave a Reply