
ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದರಲ್ಲಿ, ಹಾವು ಕಡಿತದಿಂದ ಪತ್ನಿ ಮತ್ತು ಅಪ್ರಾಪ್ತ ಮಗಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.



ಪೊಲೀಸರ ಪ್ರಕಾರ, ಆರೋಪಿಯನ್ನು ಕೆ ಗಣೇಶ್ ಪಾತ್ರಾ ಎಂದು ಗುರುತಿಸಲಾಗಿದ್ದು, ಪಾತ್ರಾ ಹಾವಾಡಿಗನಿಂದ ನಾಗರಹಾವನ್ನು ಖರೀದಿಸಿ ಅಕ್ಟೋಬರ್ 7 ರಂದು ತನ್ನ ಹೆಂಡತಿ ಮತ್ತು ಅಪ್ರಾಪ್ತ ಮಗಳ ಕೋಣೆಗೆ ಬಿಟ್ಟು ಸಾಯಿಸಿದ್ದಾನೆ ಎನ್ನಲಾಗಿದೆ.
ನಂತರ ಹಾವು ತಾಯಿ-ಮಗಳನ್ನು ಕಚ್ಚಿದ ಬಳಿಕ ಇಬ್ಬರನ್ನು ನಂತರ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯಕೀಯ ಪರೀಕ್ಷೆಯ ನಂತರ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಈ ನಡುವೆ ಆರಂಭದಲ್ಲಿ, ಪೊಲೀಸರು ಇದನ್ನು ಹಾವು ಕಡಿತದಿಂದ ಅಸ್ವಾಭಾವಿಕ ಸಾವು ಎಂದು ಪರಿಗಣಿಸಿದ್ದರು, ಆದರೆ ಮಾವ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ ನಂತರ ತನಿಖೆಯ ಹಾದಿಯನ್ನು ಬದಲಾಯಿಸಲಾಯಿತು ಎನ್ನಲಾಗಿದೆ.
ಆ ರಾತ್ರಿ, ಕುಟುಂಬ ಸದಸ್ಯರು ಹಾವನ್ನು ಕೊಂದು ಇಬ್ಬರನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು. ಮರಣೋತ್ತರ ವರದಿಯು ಸಾವಿಗೆ ಹಾವು ಕಡಿತ ಕಾರಣ ಎಂದು ತೋರಿಸಿದೆ. ಮೃತನ ತಂದೆಯ ಆರೋಪಗಳ ಆಧಾರದ ಮೇಲೆ ನಾವು ನಮ್ಮ ತನಿಖೆಯನ್ನು ಪ್ರಾರಂಭಿಸಿದ್ದೇವೆ. ತನಿಖೆಯ ಸಮಯದಲ್ಲಿ, ಅವರು (ಕೆ ಗಣೇಶ್ ಪಾತ್ರಾ) ಹಾವನ್ನು ಹಾವಾಡಿಗನಿಂದ ಖರೀದಿಸಿದ್ದಾರೆ ಎಂದು ನಮಗೆ ತಿಳಿದುಬಂದಿದೆ. ಚಾರ್ಮರ್ ಅವರನ್ನೂ ವಿಚಾರಣೆಗೆ ಒಳಪಡಿಸಲಾಗುವುದು” ಎಂದು ತನಿಖೆಯಲ್ಲಿ ಭಾಗಿಯಾಗಿರುವ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.