ತುಮಕೂರಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆ: ಸಾವಿಗೂ ಮುನ್ನಾ ವೀಡಿಯೋದಲ್ಲಿ ಹೇಳಿದ್ದೇನು.?

ತುಮಕೂರು: ನಗರದಲ್ಲಿ ನಿನ್ನೆ ಅಕ್ಕಪಕ್ಕದ ಮನೆಯವರ ಕಿರುಕುಳ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣಾಗಿದ್ದರು. ಹೀಗೆ ಸಾವಿಗೆ ಮುನ್ನಾ ಸೆಲ್ಫಿ ವೀಡಿಯೋ ರೆಕಾರ್ಡ್ ಮಾಡಲಾಗಿದ್ದು, ತಮ್ಮ ಸಾವಿಗೆ ಕಾರಣವನ್ನು ಮನ ಮಿಡಿಯುವಂತೆ ಬಿಚ್ಚಿಟ್ಟಿದ್ದಾರೆ.

ಅದೇನು ಅಂತ ಮುಂದೆ ಓದಿ.

ತುಮಕೂರಿನ ಸದಾಶಿವನಗರದಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರನ್ನು ಮನೆ ಯಜಮಾನ ಗರೀಬ್ ಸಾವ್, ಪತ್ನಿ ಸುಮಯಾ, ಮಕ್ಕಳಾದ ಹಾಜೀರಾ, ಮೊಹಮ್ಮದ್ ಶುಭಾನ್ ಹಾಗೂ ಮಹ್ಮದ್ ಮುನೀರ್ ಎಂಬುದಾಗಿ ತಿಳಿದು ಬಂದಿದೆ.

ದಂಪತಿಗಳಿಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರೇ, ಮೂವರು ಮಕ್ಕಳನ್ನು ನೇಣಿಗೆ ಶರಣಾಗೋ ಮುನ್ನ ತಂದೆ-ತಾಯಿ ಕತ್ತು ಹಿಸುಕಿ ಸಾಯಿಸಿದ್ದಾರೆ ಎನ್ನಲಾಗುತ್ತಿದೆ.

ಸಾವಿಗೆ ಮುನ್ನಾ ಸೆಲ್ಫಿ ವೀಡಿಯೋ ಮಾಡಿರುವಂತ ಗರೀಬ್ ಸಾಬ್, ನಮಗೆ ಸಾಲ ಹೆಚ್ಚಾಗಿದೆ. ವ್ಯಾಪರದಲ್ಲಿ ಲಾಭ ಇಲ್ಲ. ಕೆಲಸಕ್ಕೆ ಹೋದ್ರೇ ಹಣ ಬರುತ್ತಿಲ್ಲ. ಸಂಸಾರ ಮಾಡೋದು ಕಷ್ಟವಾಗಿತ್ತು. ಒಂದು ಹೊತ್ತಿನ ಊಟಕ್ಕೂ ತೊಂದರೆಯಾಗಿತ್ತು. ಊರಲ್ಲಿ ಸಂಬಂಧಿಕರೇ ವಿಷ ಕಾರಿದರು. ಹೀಗಾಗಿ ನಗರಕ್ಕೆ ಬಂದಿದ್ದೆವು. ಬಾಡಿಗೆ ಮನೆಗೆ 45 ಸಾವಿರ ಅಡ್ವಾನ್ಸ್ ಕೊಡಲಾಗಿತ್ತು. ಮೂರು ತಿಂಗಳ ಬಾಡಿಗೆ ಕೊಡೋದು ಬಾಕಿಯಿದೆ. ಉಳಿದ ಹಣ ನಮ್ಮ ದೊಡ್ಡಮ್ಮನಿಗೆ ವಾಪಾಸ್ ಕೊಡಿ ಎಂದಿದ್ದಾರೆ.

ಇನ್ನೂ ನಾವು ಬಾಡಿಗೆಗೆ ಇರೋ ಕೆಳಮನೆಯವರು ನಮಗೆ ತುಂಬಾ ಕಾಟ ಕೊಟ್ಟಿದ್ದಾರೆ. ನಮ್ಮ ಮನೆಯ ಕೆಳಗಿನ ಖಲಂದರ್, ಅವರ ಮಗಳು ಸಾನಿಯಾ, ಹಿರಿಯ ಮಗ, ಮಹಡಿ ಮನೆಯ ಶಬಾನಾ, ಅವರ ಮಗಳು ಸಾನಿಯಾ ಇವರೆಲ್ಲರೂ ನಮ್ಮ ಸಾವಿಗೆ ಕಾರಣ ಅಂತ ತಿಳಿಸಿದ್ದಾರೆ.

Leave a Reply