November 8, 2025
WhatsApp Image 2023-12-02 at 8.51.51 AM

ಬೆಂಗಳೂರು : ಹೊಸದಾಗಿ ರೇಷನ್ ಕಾರ್ಡ್ ಮಾಡಿಸಬೇಕು ಅನ್ನೋರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಒಂದು ದಿನದ ಅವಕಾಶ ನೀಡಿದೆ.

ಕರ್ನಾಟಕ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 3ರಂದು ಅವಕಾಶ ನೀಡಿದೆ.

ಆದ್ರೆ, ನೆನಪಿರಲಿ, ಹೊಸ ರೇಷನ್ ಕಾರ್ಡ್‌ಗೆ ಅರ್ಜಿಸಲು ಕೇವಲ ಒಂದು ದಿನ ಮಾತ್ರ ಕಾಲಾವಕಾಶ ನೀಡಿಲಾಗಿದೆ.

ಅದ್ರಂತೆ, ಡಿಸೆಂಬರ್ 3ರಂದು ಬೆಳಗ್ಗೆ 11ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಹೆಚ್ಚಿನ ಅರ್ಜಿ ಸಲ್ಲಿಕೆ‌ಯಾಗುವ ಹಿನ್ನೆಲೆ ಕಡಿಮೆ ಸಮಯಾವಕಾಶ ಕೊಡಲಾಗಿದೆ. ಹೀಗಾಗಿ ಹೊಸ ರೇಷನ್ ಕಾರ್ಡ್ ಮಾಡಿಸಬೇಕು ಎಂದುಕೊಂಡವರು, ಡಿಸೆಂಬರ್ 3 ಅಂದ್ರೆ ಭಾನುವಾರ ಮರೆಯದೇ ಅರ್ಜಿ ಸಲ್ಲಿಸಿ.

About The Author

Leave a Reply