ಸುಳ್ಳು ಸುದ್ದಿ ಹರಡುವ 9 ಯೂಟ್ಯೂಬ್ ಚಾನಲ್ ಗಳ ಪಟ್ಟಿ ಪ್ರಕಟಿಸಿದ ಪಿಐಬಿ

ಬೆಂಗಳೂರು: ಪ್ರೆಸ್ ಇನ್ ಫಾರ್ಮೆಶನ್ ಬ್ಯುರೊದ ಫ್ಯಾಕ್ಟ್ ಚೆಕ್ ವಿಭಾಗ, ಸುಳ್ಳು ಸುದ್ದಿಗಳನ್ನು ಹರಡುವ 9 ಯೂಟ್ಯೂಬ್ ಚಾನೆಲ್ ಗಳ ಹೆಸರುಗಳನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರಕಟಿಸಿದೆ.

ಪಿಬಿಐ ಫ್ಯಾಕ್ಟ್ ಚೆಕ್ ವಿಭಾಗದ ವರದಿಯ ಪ್ರಕಾರ ಈ ಕೆಳಗಿನ 9 ಯೂಟ್ಯೂಬ್ ಚಾನೆಲ್ ಗಳು ಸುಳ್ಳು ಸುದ್ದಿಯನ್ನು ಹರಡುತ್ತಿದೆ ಎಂದು ತಿಳಿಸಿದೆ.

* Sarkari Yojana Official

* Sansani Live

* Bajrang Education

* Aapke Guruji

* BJ News

* Ab Bolega Bharat

* GVT News

* Daily Study

* Bharat Ekta News

ಈ 9 ಯೂಟ್ಯೂಬ್ ಚಾನೆಲ್ ಗಳು 83 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದ್ದವು ಎಂದು ಪಿಬಿಐ ಫ್ಯಾಕ್ಟ್ ಚೆಕ್ ವಿಭಾಗ ಮಾಹಿತಿ ಹಂಚಿಕೊಂಡಿದೆ. ಇನ್ನು ಈ ವರದಿಯ ಅನುಸಾರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಈ ಚಾನೆಲ್ ಗಳನ್ನು ಯಾವ ಕ್ಷಣದಲ್ಲಾದರೂ ಸ್ಥಗಿತಗೊಳಿಸಬಹುದಾಗಿದೆ.

ಇತ್ತೀಚೆಗೆ ದಿನಕ್ಕೊಂದು ಯೂಟ್ಯೂಬ್ ಚಾನಲ್ ಗಳು ಹುಟ್ಟಿಕೊಳ್ಳುತ್ತಿದೆ. ಇದರಲ್ಲಿ ಕೆಲವೊಂದು ಚಾನೆಲ್ ಗಳು ಉತ್ತಮ ಮಾಹಿತಿಯನ್ನು, ವಾಸ್ತವ ಸುದ್ದಿಗಳನ್ನು ಸಮಾಜಕ್ಕೆ ನೀಡುತ್ತದೆ. ಆದರೆ ಕೆಲವೊಂದು ಚಾನೆಲ್ ಗಳು ಸುಳ್ಳು ಸುದ್ದಿಗಳನ್ನು ಹರಡುತ್ತ, ಸಮಾಜದ ದಿಕ್ಕು ತಪ್ಪಿಸುತ್ತಿದೆ. ಹೀಗೆ ಸುಳ್ಳು ಸುದ್ದಿ ಹರಡುತ್ತಿರುವ ಚಾನೆಲ್ ಗಳಿಗೆ ಪಿಬಿಐ ಫ್ಯಾಕ್ಟ್ ಚೆಕ್ ವಿಭಾಗದ ಈ ವರದಿ ಮುನ್ನೆಚ್ಚರಿಕೆ ನೀಡಿದಂತಾಗಿದೆ.

Leave a Reply