
ಮಂಗಳೂರು : ನಗರದ ಹೊರವಲಯದ ಅಂಬ್ಲಮೊಗರು ಗ್ರಾಮದ ತಿಲಕನಗರ ಮತ್ತು ಬೆಳ್ಮ ಗ್ರಾಮದ ದೇರಳಕಟ್ಟೆಯ ಗ್ರೀನ್ ಗೌಂಡ್‌ನಲ್ಲಿ ಈ ಹಿಂದೆ ನಡೆದ ವಾಹನ ಕಳವು ಪ್ರಕರಣದ ಆರೋಪಿಯನ್ನು ಕೊಣಾಜೆ ಪೊಲೀಸರು ಬಂಧಿಸಿ, ಮೂರು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಬೆಳ್ಮ ಗ್ರಾಮದ ಕನಕೂರು ಸೈಟ್ ನಿವಾಸಿ ಹುಸೈನ್ ಜಾಹೀದ್ (24) ಎಂದು ಗುರುತಿಸಲಾಗಿದ್ದು, ಈತನಿಂದ ಕಳವು ಮಾಡಿದ ಎರಡು ಸ್ಕೂಟರ್‌ಗಳಲ್ಲದೇ, ನಂಬರ್ ಪ್ಲೇಟ್ ಇಲ್ಲದ ಇನ್ನೊಂದು ಸ್ಕೂಟರ್ ವಶಪಡಿಸಿಕೊಂಡಿದ್ದಾರೆ. ಈ ಮೂರು ವಾಹನಗಳ ಮೊತ್ತ 68,000 ರೂ. ಎಂದು ಅಂದಾಜಿಸಲಾಗಿದೆ. ಅ.22ರಂದು ಅಂಬ್ಲಮೊಗರು ಗ್ರಾಮದ ಐಸಮ್ಮ ಎಂಬವರ ಸ್ಕೂಟರ್ ಮತ್ತು ನ.16ರಂದು ದೇರಳಕಟ್ಟೆಯ ಗುಲಾಮ್ ಹುಸೇನ್ ಎಂಬವರ ಸ್ಕೂಟರ್ ಕಳವಾಗಿತ್ತು. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿತ್ತು.


