October 26, 2025
WhatsApp Image 2023-12-04 at 6.16.22 PM

ವದೆಹಲಿ: ಮಣಿಪುರದ ತೆಂಗ್ನೌಪಾಲ್ ಜಿಲ್ಲೆಯಲ್ಲಿ ಸೋಮವಾರ ಮಧ್ಯಾಹ್ನ ನಡೆದ ಹಿಂಸಾಚಾರದಲ್ಲಿ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ.

ಮಧ್ಯಾಹ್ನದ ಸುಮಾರಿಗೆ, ತೆಂಗ್ನೌಪಾಲ್ ಜಿಲ್ಲೆಯ ಸೈಬೋಲ್ ಬಳಿಯ ಲೈತು ಗ್ರಾಮದಲ್ಲಿ ಭಯೋತ್ಪಾದಕರ ಎರಡು ಗುಂಪುಗಳ ನಡುವೆ ಗುಂಡಿನ ಚಕಮಕಿ ನಡೆದ ಬಗ್ಗೆ ಮಾಹಿತಿ ಬಂದಿದೆ ಎಂದು ಭದ್ರತಾ ಪಡೆಗಳ ಅಧಿಕಾರಿಗಳು ತಿಳಿಸಿದ್ದಾರೆ.

 

ಇನ್ನು “ಹತ್ತಿರದ ಭದ್ರತಾ ಪಡೆಗಳು ಈ ಸ್ಥಳದಿಂದ ಸುಮಾರು 10 ಕಿ.ಮೀ ದೂರದಲ್ಲಿದ್ದವು. ನಮ್ಮ ಪಡೆಗಳು ಸ್ಥಳಕ್ಕೆ ತೆರಳಿ ತಲುಪಿದ ನಂತರ, ಅವರು ಲೈತು ಗ್ರಾಮದಲ್ಲಿ 13 ಶವಗಳನ್ನ ಕಂಡುಕೊಂಡರು. ಶವಗಳ ಪಕ್ಕದಲ್ಲಿ ಯಾವುದೇ ಶಸ್ತ್ರಾಸ್ತ್ರಗಳು ಕಂಡುಬಂದಿಲ್ಲ” ಎಂದು ಈ ವಿಷಯದ ಬಗ್ಗೆ ತಿಳಿದಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೃತರು ಲೈತು ಪ್ರದೇಶದವರಲ್ಲ ಮತ್ತು ಬೇರೆ ಸ್ಥಳದಿಂದ ಬಂದಿರಬಹುದು ಎಂದು ತೋರುತ್ತದೆ, ಇನ್ನು ಅವರು ಪ್ರತ್ಯೇಕ ಗುಂಪಿನೊಂದಿಗೆ ಗುಂಡಿನ ಚಕಮಕಿಯಲ್ಲಿ ತೊಡಗಿರಬಹುದು ಎಂದು ಅಧಿಕಾರಿ ಹೇಳಿದರು.

ಅಂದ್ಹಾಗೆ, ಪೊಲೀಸರು ಅಥವಾ ಭದ್ರತಾ ಪಡೆಗಳು ಮೃತ ಜನರ ಗುರುತನ್ನ ದೃಢಪಡಿಸಿಲ್ಲ.

About The Author

Leave a Reply