ಮಂಗಳೂರಿನಲ್ಲಿ ಮೂರು ದಿನ ನೀರು ಪೂರೈಕೆ ವ್ಯತ್ಯಯ

ಮಂಗಳೂರು: ಮಂಗಳೂರು ಮಹಾ ನಗರಪಾಲಿಕೆಯು ನೀರು ಸರಬರಾಜು ವ್ಯವಸ್ಥೆಯ ಕೊಳವೆಯನ್ನು ಬಲಪಡಿಸುವ ಕಾಮಗಾರಿಯನ್ನು ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಡಿ. 6 ರ ಬುಧವಾರ ಬೆಳಗ್ಗೆ 6 ಗಂಟೆಯಿಂದ ಡಿ. 8 ರ ಶುಕ್ರವಾರ ಬೆಳಗ್ಗೆ 6 ಗಂಟೆಯ ವರೆಗೆ ನಗರ ಪಾಲಿಕೆ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆ ವ್ಯತ್ಯಯಗೊಳ್ಳಲಿದೆ ಎಂದು ಪಾಲಿಕೆಯ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ತಿಳಿಸಿದ್ದಾರೆ.ತುಂಬೆ- ಬೆಂದೂರ್‌ವೆಲ್–ಪಣಂಬೂರು ಪ್ರದೇಶಗಳಿಗೆ ನೀರು ಪೂರೈಸುವ 1 ಸಾವಿರ ಮಿಲಿ ಮೀಟರ್ ವ್ಯಾಸದ ಮುಖ್ಯ ಕೊಳವೆಯನ್ನು ನಾಗುರಿ ಮಾರುಕಟ್ಟೆ ಬಳಿ ಬಲಪಡಿಸುವುದು, ತುಂಬೆ ರಾಮಲ್‌ಕಟ್ಟೆ ಬಳಿ ಕೆಯುಐಡಿಎಫ್‌ಸಿ ವತಿಯಿಂದ ಬಲ್ಕ್‌ ಫ್ಲೋ ಮೀಟರ್‌ ಅಳವಡಿಕೆ ಹಾಗೂ ಪಾಲಿಕೆ ವತಿಯಿಂದ 900 ಮಿ.ಮೀ ವ್ಯಾಸದ ಕೊಳವೆಯನ್ನು ಕೆಐಒಸಿಎಲ್‌ ಬಳಿ ಬದಲಾಯಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಮಂಗಳೂರಿನ ಬೆಂದೂರ್‌ವೆಲ್‌ಗಿಂತ ತಗ್ಗಿನಲ್ಲಿರುವ ಪ್ರದೇಶಗಳಾದ ಪಿ.ವಿ.ಎಸ್, ಲೇಡಿಹಿಲ್, ಬಂದರು ಹಾಗೂ ಮೇರಿಹಿಲ್, ಪಚ್ಚನಾಡಿ, ಅಶೋಕನಗರ, ದೇರೆಬೈಲ್, ಕೊಡಿಯಾಲ್‌ಬೈಲ್, ಕದ್ರಿ, ನಾಗುರಿ, ಸುರತ್ಕಲ್, ಕಾಟಿಪಳ್ಳ, ಕೂಳೂರು, ಜಲ್ಲಿಗುಡ್ಡೆ, ಕೋಡಿಕಲ್ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆಯು ಭಾಗಶಃ ಸ್ಥಗಿತಗೊಳ್ಳಲಿದೆ. ಕಾನ, ಬಾಳ, ಕುಳಾಯಿ, ಮುಕ್ಕ, ಪಣಂಬೂರು ಪ್ರದೇಶಗಳಿಗೆ ನೀರು ಪೂರೈಕೆಯನ್ನು ಸಂಪೂರ್ಣವಾಗಿ ಸ್ಥಗಿತ ಮಾಡಲಾಗುತ್ತದೆ ಎಂದವರು ತಿಳಿಸಿದ್ದಾರೆ.

Leave a Reply