
ಬೆಳಗಾವಿ: ಇಂದು ವಿಧಾನಸಭೆಯಲ್ಲಿ ವೈದ್ಯಕೀಯ ವ್ಯಾಸಂಗ ಮಾಡುವಂತ ವಿದ್ಯಾರ್ಥಿಗಳು ಕಡ್ಡಾಯ ಗ್ರಾಮೀಣ ಸೇವೆ ಮಾಡುವುದರಿಂದ ವಿನಾಯ್ತಿ ನೀಡೋ ಸಂಬಂಧ, ತಿದ್ದುಪಡಿ ವಿಧೇಯಕವನ್ನು ಮಂಡಿಸಲಾಯಿತು.



ಇಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವಂತ ವಿಧಾನಸಭೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು 2023ನೇ ಸಾಲಿನಲ್ಲಿ ವೈದ್ಯಕೀಯ ಕೋರ್ಸ್ ಮುಗುಸಿದಂತವರು ಕಡ್ಡಾಯ ಗ್ರಾಮೀಣ ಸೇವೆಯಿಂದ ವಿನಾಯ್ತಿ ನೀಡುವಂತ ತಿದ್ದುಪಡಿ ಕಾಯ್ದೆಯನ್ನು ಮಂಡಿಸಿದರು.
2023ನೇ ಸಾಲಿನ ಈ ವರ್ಷದಿಂದ ತಿದ್ದುಪಡಿ ವಿಧೇಯಕ ಎರಡು ಸದನಲ್ಲಿ ಅಂಗೀಕಾರಗೊಂಡರೇ, ವೈದ್ಯಕೀಯ ವ್ಯಾಸಂಗ ಮುಗಿಸಿದಂತ ವಿದ್ಯಾರ್ಥಿಗಳು ಕಡ್ಡಾಯವಾಗಿ ಗ್ರಾಮೀಣ ಸೇವೆ ಮಾಡೋದರಿಂದ ಬಿಲ್ ವಿನಾಯ್ತಿ ನೀಡಲಿದೆ.
ಅಂದಹಾಗೇ ಈಗಾಗಲೇ ಎಂಬಿಬಿಎಸ್ ಮುಗಿಸಿದಂತ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಗೈದಿದ್ದಾರೆ. ಗೈಯ್ಯುತ್ತಿದ್ದಾರೆ. ಅವರಿಗೆ ರಾಜ್ಯ ಸರ್ಕಾರದಿಂದ ಗೌರವ ಧನ ಕೂಡ ನೀಡಲಾಗುತ್ತಿದೆ. ಇದೀಗ ಈ ಕಡ್ಡಾಯ ಗ್ರಾಮೀಣ ಸೇವೆಯಿಂದ ತಿದ್ದುಪಡಿ ಬಿಲ್ ಮಂಡನೆಯಿಂದ ವಿನಾಯ್ತಿ ದೊರೆಯಲಿದೆ.