ಬಂಟ್ವಾಳ: ಹೋಟೆಲ್ ‌ಕಾರ್ಮಿಕ ವಿಷ ಸೇವಿಸಿ ಆತ್ಮಹತ್ಯೆ..!

ಬಂಟ್ವಾಳ: ಸಾಲದ ಬಾಧೆಯಿಂದ ಬಳಲುತ್ತಿದ್ದ ಹೋಟೆಲ್ ‌ಕಾರ್ಮಿಕನೋರ್ವ ಚೀಟಿ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಬಡ್ಡಕಟ್ಟೆ ಎಂಬಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ಸೋಮನಾಥ ನಿವಾಸಿ ಶೇಖರ ದೇವಾಡಿಗ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
‌ಬಂಟ್ವಾಳ ಬಡ್ಡಕಟ್ಟೆ ಎಂಬಲ್ಲಿರುವ ಹೋಟೆಲ್ ಒಂದರಲ್ಲಿ ಕಳೆದ ಐದು ತಿಂಗಳಿನಿಂದ ಅಡುಗೆ ಕೆಲಸ ಮಾಡಿಕೊಂಡಿದ್ದ ಈತ ವಾರಕ್ಕೊಮ್ಮೆ ‌ಊರಿಗೆ ಹೋಗಿ ಬರುತ್ತಿದ್ದ.
ಡಿ.4 ರಂದು ಸೋಮವಾರ ರಾತ್ರಿ ಕೆಲಸ ಮುಗಿಸಿ , ಬಳಿಕ ಹೋಟೆಲ್ ನ ಮಾಲೀಕರ ವಿಶ್ರಾಂತಿ ಕೊಠಡಿಯಲ್ಲಿ ಮಲಗಿದ್ದರು.
ಮುಂಜಾನೆ ಬೇಗ ಎದ್ದು ಹೋಟೆಲ್ ನ ಅಡುಗೆ ಕೆಲಸಕ್ಕೆ ಬರುತ್ತಿದ್ದ. ಇಂದು ಬೆಳಿಗ್ಗೆ ಕೆಲಸಕ್ಕೆ ಬಾರದ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕ ಕಾರ್ಮಿಕನಿಗೆ ಪೋನ್ ಮಾಡಿದಾಗ ಆತ ರಿಸೀವ್ ಮಾಡಲಿಲ್ಲ. ಸಂಶಯಗೊಂಡ ಹೋಟೆಲ್ ಮಾಲೀಕ ವಿಶ್ರಾಂತಿ ಕೊಠಡಿ ಗೆ ತೆರಳಿದಾಗ ಮಲಗಿರುವುದು ಕಂಡು ಎಬ್ಬಿಸಿದರು. ಆದರೆ ಆತ ಮಲಗಿರುವ ಪಕ್ಕ ವಿಷದ ಬಾಟಲಿ ಮತ್ತು ಚೀಟಿಯೊಂದಿದ್ದು, ಈತ ವಿಷ ಸೇವಿಸಿರುವ ಬಗ್ಗೆ ಸಂಶಯದಿಂದ ಪೋಲೀಸರಿಗೆ ತಿಳಿಸಿದ್ದಾರೆ.
ಬಂಟ್ವಾಳ ನಗರ ಠಾಣಾ ಎಸ್.ಐ‌. ರಾಮಕೃಷ್ಣ ಅವರು ಸ್ಥಳಕ್ಕೆ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Reply