November 8, 2025
WhatsApp Image 2023-12-09 at 1.20.52 PM

ಬಂಟ್ವಾಳ: ಅಡುಗೆ ಅನಿಲ ಸೋರಿಕೆಯಾಗಿ ಮನೆಯೊಂದರಲ್ಲಿ ಗುರುವಾರ ರಾತ್ರಿ ಅಗ್ನಿ ಅವಘಡ ಸಂಭವಿಸಿದ ಘಟನೆ ಬಂಟ್ವಾಳ ತಾಲೂಕು ಪುದು ಗ್ರಾಮದ ಕಬೆಲ ಬಳಿ ನಡೆದಿದೆ.

ಕಬೆಲ ನಿವಾಸಿ ಉಮೇಶ್ ಪೂಜಾರಿಯವರ ಬಾಡಿಗೆ ಮನೆಯಲ್ಲಿಈ ಅನಾಹುತ ಸಂಭವಿಸಿದೆ. ಉಮೇಶ್ ಪೂಜಾರಿ ಅವರ ಮನೆಯಲ್ಲಿ ವಾಸವಾಗಿದ್ದ ಬಾಡಿಗೆದಾರ ಹೊನ್ನಪ್ಪ ಗೌಡ ಎಂಬವರು ಅನಿಲ ಸೋರಿಕೆಯಾಗಿರುವುದನ್ನು ಗಮನಿಸದೆ ರಾತ್ರಿ ಅಡುಗೆ ಮಾಡಲು ಗ್ಯಾಸ್ ಉರಿಸಲು ಹೋದಾಗ ಬೆಂಕಿ ಅವಘಡವಾಗಿದೆ

ಘಟನೆಯಿಂದ ಮನೆಯ ಒಳಗಿದ್ದ ವಸ್ತುಗಳು ಹೊತ್ತಿ ಉರಿದಿದ್ದು, ಮಾಡಿನ ಹಂಚು ಚೆಲ್ಲಾಪಿಲ್ಲಿಯಾಗಿದ್ದು. ಸಾವಿರಾರು ರೂ. ನಷ್ಟವಾಗಿದೆ. ಬಂಟ್ವಾಳ ಅಗ್ನಿ ಶಾಮಕ ದಳದವರು ಬೆಂಕಿ ಆರಿಸಿದ್ದು, ಗ್ರಾಮಸ್ಥರು ಸಹಕರಿಸಿದರು. ಗ್ರಾಮ ಕರಣಿಕರಾದ ಅಶ್ವಿನಿ ಯವರು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದರು.

 

About The Author

Leave a Reply