ಕೆರೆಗೆ ಉರುಳಿದ ಕಾರು – ನಾಲ್ಕು ಜನರ ದುರ್ಮರಣ..!

ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44ರ ಚಿಕ್ಕಬಳ್ಳಾಪುರ ಬೈಪಾಸ್ ​ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಪರಿಣಾಮ ನಾಲ್ಕು ಜನರು ದುರ್ಮರಣ ಹೊಂದಿದ್ದಾರೆ.

ಚಿಕ್ಕಬಳ್ಳಾಪುರ ಬೈಪಾಸ್​ಬಳಿ ಹೊಂದಿಕೊಂಡಿರುವ ಅಮಾನಿ ಗೋಪಾಲಕೃಷ್ಣ ಕೆರೆಯ ನೀರಿಗೆ ಕಾರು ಉರುಳಿಬಿದ್ದು ಟ್ಯಾಗೂರು(21), ಪವನ್(22), ಆರ್ಯನ್(22), ವಸಂತ್(21) ಮೃತಪಟ್ಟಿದ್ದಾರೆ

ಕಾರು ಬೆಂಗಳೂರಿನಿಂದ ಬಾಗೇಪಲ್ಲಿ ಕಡೆಗೆ ಹೋಗುತ್ತಿದ್ದಾಗ ಘಟನೆ ನಡೆದಿದ್ದು ನಾಲ್ವರು ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಸ್ಥಳೀಯ ಅಗ್ನಿಶಾಮಕದಳ ಹಾಗೂ ಸಂಚಾರಿ ಠಾಣೆ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಯುವಕರನ್ನು ರಕ್ಷಿಸುವ ಕೆಲಸ ಮಾಡಿದ್ದಾರೆ. ಹರಸಾಹಸ ಪಟ್ಟು ಕಾರನ್ನು ಕೆರೆಯಿಂದ ಮೇಲೆ ಎತ್ತುವ ಕೆಲಸ ಮಾಡಲಾಯಿತು.

Leave a Reply