ಸೆರ್ಕಳ ಶಾಲೆಯಲ್ಲಿ ತೇಜಸ್ವಿನಿ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ

ಆದುನಿಕ ಜಗತ್ತು ಎಷ್ಟೇ ಬೆಳೆದರೂ ಒಂದು ಹನಿ ರಕ್ತವನ್ನು ಉತ್ಪಾದಿಸಲು ಇದುವರೆಗೂ ಯಾವುದೇ ಕಾರ್ಪೊರೇಟ್ ಕಂಪೆನಿಗಳಿಗೆ ಸಾದ್ಯವಾಗಿಲ್ಲ,ರಕ್ತದಾನದ ಹೆಸರಲ್ಲಿ ಸಂಘಸಂಸ್ಥೆಗಳ ವ್ಯಾಪರೀಕರಣ ಸಲ್ಲದು : ಅಸ್ಮ ಹಸೈನಾರ್ ತಾಳಿತ್ತನೂಜಿ ಉಪಾಧ್ಯಕ್ಷರು ಕೊಳ್ನಾಡು ಗ್ರಾಮ ಪಂಚಾಯತ್ 

ಶಾಲಾಭಿವೃದ್ದಿ‌ ಮತ್ತು ಮೆಲುಸ್ತುವಾರಿ ಸಮಿತಿ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಸೆರ್ಕಳ ಇದರ ವತಿಯಿಂದ ತೇಜಸ್ವಿನಿ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ ಇಂದು ಸೆರ್ಕಳ ಶಾಲೆಯಲ್ಲಿ SDMC ಅದ್ಯಕ್ಷರಾದ ಅಶ್ರಪ್ ಸೆರ್ಕಳ ಅವರ ಅಧ್ಯಕ್ಷತೆಯಲ್ಲಿ ಜರಗಿತು.ಕಾರ್ಯಕ್ರಮವನ್ನು ಉದ್ದೇಶಿಸಿ ಕೊಳ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಅಸ್ಮ ಹಸೈನಾರ್ ಮಾತಾಡಿ,ಈ ಆಧುನಿಕ ಜಗತ್ತು ಎಷ್ಟೇ ಬೆಳೆದರು ವಿಶ್ವದಲ್ಲಿ ಒಂದೇ ಒಂದು ಬಿಂದು ರಕ್ತ ಉತ್ಪಾದಿಸಲು ಇದುವರೆಗೂ ಸಾಧ್ಯವಾಗಲಿಲ್ಲ. ರಕ್ತವು ಮಾನವನ ದೇಹದಲ್ಲಿ ಉತ್ಪಾದನೆಯಾಗುವ ಒಂದು ಕ್ರಿಯೆಯಾಗಿದೆ.ಆಯಾ ಸಂಧರ್ಭಗಳಲ್ಲಿ ರಕ್ತವನ್ನು ಒಬ್ಬರಿಂದ ಒಬ್ಬರಿಗೆ ನೀಡುವ ಹೊರತು ಯಾವುದೇ ಪರ್ಯಾಯ ಮಾರ್ಗವಿಲ್ಲ.ರಕ್ತದಾನ ಮತ್ತು ನೇತ್ರದಾನ ಜಗತ್ತಿನ ಶ್ರೇಷ್ಠ ದಾನಗಳಲ್ಲೊಂದಾಗಿದೆ.ರಕ್ತ ಸ್ವತಃ ನೀಡುವುದರಿಂದ ನಮ್ಮ ಶರೀರಕ್ಕೂ ಬಹಳ ಪ್ರಯೋಜನಗಳಿವೆ ಎಂದು ತಿಳಿಸಿದರು,ಅಲ್ಲದೆ ಶಾಲಾಭಿವೃದ್ದಿ ಸಮಿತಿಯವರು ಶಿಕ್ಷಣವನ್ನು ಪ್ರೋತ್ಸಾಹಿಸುವುದರೊಂದಿಗೆ ಸಾಮಾಜಿಕ,ಆರೋಗ್ಯ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಇಲ್ಲಿನ ಕ್ರಿಯಾಶೀಲ ಅದ್ಯಕ್ಷರಾದ ಅಶ್ರಪ್ ಸೆರ್ಕಳ ಇತರರಿಗೆ ಮಾದರಿಯಾಗಿದ್ದಾರೆ.ರಕ್ತಗಳಲ್ಲಿ ಯಾವುದೇ ಜಾತಿಮತ,ಬಡವಬಲ್ಲಿದನೆಂಬ ಬೇದವಿಲ್ಲ.ಆದರೆ ಇತ್ತಿಚಿನ ದಿನಗಳಲ್ಲಿ ಕಾರ್ಪೊರೇಟ್ ಆಸ್ಪತ್ರೆಗಳ ಹಾವಳಿಯಿಂದಾಗಿ ಎಲ್ಲವೂ ದಂದೆಯೊಂದಿಗೆ ವ್ಯಾಪರೀಕರಣವಾಗುತ್ತಿದೆ.ಕೆಲವು ಸಂಘಸಂಸ್ಥೆಗಳು ಇವರೊಂದಿಗೆ ಕೈಜೋಡಿಸಿದ ಉದಾಹರಣೆಗಳು ಕೂಡ ಇದೆ.ಸಂಘಸಂಸ್ಥೆಗಳ ಸಮಾಜಸೇವೆ ಎಂಬ ಹೆಸರಲ್ಲಿ ರಕ್ತದಾನ,ಉಚಿತ ಆರೋಗ್ಯ ಸೇವೆ ಎಂಬ ಮುದ್ದಾದ ಹೆಸರಿನೊಂದಿಗೆ ವ್ಯಾಪರೀಕರಣ ಸಲ್ಲದು ಎಂದು ಈ ಸಂದರ್ಭದಲ್ಲಿ ತಿಳಿಸಿದರು.ಶಾಲಾ ಮೇಲುಸ್ತುವಾರಿ ಸಮಿತಿಯವರು ಜಿಲ್ಲಾ ಆಸ್ಪತ್ರೆಗಳಲ್ಲಿ ರಕ್ತದ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ರಕ್ತದಾನ ಎರ್ಪಡಿಸುವ ಕಾರ್ಯಕ್ರಮ ಹಮ್ಮಿಕೊಂಡು ಕೈಗೊಂಡ ತೀರ್ಮಾನ ಒಳ್ಳೆಯ ಬೆಳೆವಣಿಗೆ ಎಂದು ತಿಳಿಸುತ್ತಾ,ಶಿಬಿರರಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು.. ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಂ.ಎಸ್ ಮಹಮ್ಮದ್ ಮಾತಾಡಿ ಬಿಡುವಿಲ್ಲದ ಕಾರ್ಯಕ್ರಮದ ನಡುವೆಯೂ ಶಾಲಾಭಿವೃದ್ದಿ ಸಮಿತಿ ಅದ್ಯಕ್ಷರ ಶಿಕ್ಷಣ ಪ್ರೋತ್ಸಾಹದೊಂದಿಗೆ ಸಮಾಜಿಕ ಆರೋಗ್ಯಕ್ಷೇತ್ರದ ಅವರ ಕಾಳಜಿಯ ಕರೆಗೆ ಬಂದಿದ್ದೇನೆ ಮತ್ತು ರಕ್ತದಾನದ ಮಹತ್ವ ತಿಳಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು..

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀ. ಬಿ‌.ರಮನಾಥ ರೈ ದ.ಕ.ಜಿ.ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಎಂ.ಎಸ್.ಮಹಮ್ಮದ್,ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಅಬ್ಬಾಸ್ ಅಲಿ,ಕೊಳ್ನಾಡು ಗ್ರಾ.ಪಂಚಾಯತ್ ಅದ್ಯಕ್ಷರಾದ ಅಶ್ರಪ್ ಕೆ.ಸಾಲೆತ್ತೂರು ಮಾತಾಡಿ ಕಾರ್ಯಕ್ರಮಕ್ಕೆ ಶುಭಕೋರಿದರು.

ಈ ಶಾಲಾಭಿವೃದ್ದಿ ಸಮಿತಿಯ ಕಾರ್ಯಕ್ರಮದ ವೇದಿಕೆಯಲ್ಲಿ ಕೊಳ್ನಾಡು ಗ್ರಾಮ ಪಂಚಾಯತ್ ಮಾಜಿ ಅದ್ಯಕ್ಷರೂ, ಸ್ಥಳೀಯ ಸದಸ್ಯರಾದ ನೆಬಿಸಾ ಖಾದರ್,ಕೊಳ್ನಾಡು ಗ್ರಾ.ಪಂಚಾಯತ್ ಸದಸ್ಯರಾದ ಹಮೀದ್ ಸುರಿಬೈಲ್, ಜಯಂತಿ ಜನಾರ್ದನ ಗೌಡ ಸೆರ್ಕಳ,ಶಾಲಾಭಿವೃದ್ದಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು

Leave a Reply