October 13, 2025
WhatsApp Image 2023-12-13 at 8.46.26 AM

ಕಾಪು: ಸಮಾಜ ಸೇವಕ,ರಾಜಕೀಯ ಮುಖಂಡ,ನಾಟಕಕಾರ ಕಾಪು ಲೀಲಾಧರ ಶೆಟ್ಟಿ (68) ಮತ್ತು ಅವರ ಪತ್ನಿ ವಸುಂಧರಾ ಶೆಟ್ಟಿ (59) ದಂಪತಿ ಜೊತೆಯಾಗಿ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ. ಇವರಿಬ್ವರು ಮಂಗಳವಾರ ರಾತ್ರಿ ತಮ್ಮ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲೀಲಾಧರ ಶೆಟ್ಟಿಯವರು ಕಾಪುವಿನಲ್ಲಿ ರಂಗ ತರಂಗ ಎಂಬ ನಾಟಕ ಸಂಸ್ಥೆಯನ್ನು ಹುಟ್ಟು ಹಾಕಿದ್ದರು. ಸದಾ ಸಮಾಜಪರ ಕಾಳಜಿ ಹೊಂದಿದ್ದ ಅವರು ಯಾವುದೇ ಕ್ಷಣದಲ್ಲಿ ಕೂಡ ಅಶಕ್ತರ ನೆರವಿಗೆ ಧಾವಿಸುತ್ತಿದ್ದರು. ಆದರೂ ಇತ್ತೀಚೆಗೆ ಹಣಕಾಸಿನ ತೊಂದರೆ ಕೂಡ ಹೊಂದಿದ್ದರು ಎನ್ನಲಾಗಿದೆ. ಕೌಟುಂಬಿಕ‌ ಕಾರಣದಿಂದ ಮನನೊಂದು ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Leave a Reply