ಮಂಗಳೂರು : ಸಾವರ್ಕರ್ ಫೋಟೋ ವಿಚಾರದಲ್ಲಿ ಫೇಸ್‌ಬುಕ್‌ನಲ್ಲಿ ವಿಧಾನಸಭೆಯ ಸ್ಪೀಕರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಹೇಳನ ಮಾಡಿರುವ ಎಸ್‌ಡಿಪಿಐ ಮುಖಂಡನನ್ನು ಮಂಗಳೂರು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದರು . ಎಸ್‌ಡಿಪಿಐ ಮುಖಂಡ ರಿಯಾಜ್ ಕಡಂಬು ಬಂಧಿತ ಆರೋಪಿಯನ್ನು ಜಾಮೀನು ಮೇಲೆ ಬಿಡುಗಡೆಗೊಳಿಸಿದ್ದಾರೆ. .
ಸುವರ್ಣ ಸೌಧದಲ್ಲಿ ಸಾವರ್ಕರ್ ಫೋಟೋ ತೆರವು ಮಾಡಬೇಕೆಂಬ ವಿಚಾರ ಕೇಳಿ ಬಂದಿತ್ತು. ಫೋಟೋ ತೆರವು ಮಾಡುವ ಬಗ್ಗೆ ಅಭಿಪ್ರಾಯ ತಿಳಿಸಿದ್ದ ಸ್ಪೀಕರ್ ಅವರು, ‘ನನ್ನ ಕೆಲಸ ಜೋಡಿಸುವುದು, ಕಿತ್ತು ಬಿಸಾಕುವುದಲ್ಲ’ ಎಂದಿದ್ದರು. ಆದ್ದರಿಂದ ಫೇಸ್‌ಬುಕ್‌ನಲ್ಲಿ ಸಭಾಪತಿ ಯು.ಟಿ. ಖಾದರ್ ವಿರುದ್ದ ಪೋಸ್ಟ್ ಹಾಕಿದ್ದ ರಿಯಾಜ್ ಕಡಂಬುನನ್ನು ಸೈಬರ್ ಕ್ರೈಮ್ ಪೊಲೀಸರು ಅರೆಸ್ಟ್ ಮಾಡಿದ್ದರು.
ಅವಹೇಳನಕಾರಿ ಸಂದೇಶ ಹಾಕಿದ ಆರೋಪದ ಮೇರೆಗೆ ಮಂಗಳೂರು ಸೆನ್ ಠಾಣೆಯಲ್ಲಿ ಸ್ವಯಂಪ್ರೇರಿತ ದೂರುದಾಖಲಿಸಿಕೊಂಡಿದ್ದ ಪೊಲೀಸರು ನಗರದ ಬಿಕರ್ನಕಟ್ಟೆಯ ಪ್ಲಾಟ್‌ವೊಂದರಲ್ಲಿ ವಾಸವಾಗಿದ್ದ ರಿಯಾರು್ ಕಡಂಬು ಅವರನ್ನುಬಂಧಿಸಿ ಮಂಗಳವಾರ ರಾತ್ರಿ ಠಾಣೆಯಲ್ಲೇ ಜಾಮೀನು ಪ್ರಕ್ರಿಯೆ ನಡೆಸಿ ಬಿಡುಗಡೆಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.