November 8, 2025
WhatsApp Image 2023-12-13 at 2.35.57 PM

ನವದೆಹಲಿ: ಅಧಿವೇಶನ ನಡೆಯುತ್ತಿರುವಾಗಲೇ ಸಂಸತ್‌ನಲ್ಲಿ ಭದ್ರತಾ ಲೋಪ ಕಂಡ ಬಂದಿದೆ. ಲೋಕಸಭಾ ವೀಕ್ಷಕರ ಗ್ಯಾಲರಿಯಿಂದ ಒಬ್ಬ ವ್ಯಕ್ತಿ ಮೇಲಿನಿಂದ ಜಿಗಿದಿದ್ದಾನೆ. ತಕ್ಷಣ ಭದ್ರತಾ ಸಿಬ್ಬಂದಿ ಆತನನ್ನು ಹಿಡಿದಿದ್ದಾರೆ.

ಇಬ್ಬರು ಅಪರಿಚಿತರು ಸದನದ ಒಳಗೆ ಪ್ರವೇಶ ಮಾಡಿದ್ದಾರೆ.ಇದನ್ನು ಕಂಡ ಸದನದೊಳಗಿದ್ದ ಸಂಸದರು ಗಾಬರಿಯಿಂದ ಹೊರ ಓಡಿದ್ದಾರೆ. ಅಲ್ಲದೇ ಅಪರಿಚತರು ಕೈಯಲ್ಲಿ ಅಶ್ರುವಾಯು ಹಿಡಿದುಕೊಂಡು ಬಂದಿದ್ದು ವ್ಯಕ್ತಿಯನ್ನು ಹಿಡಿಯಲು ಯತ್ನಿಸಿದ ವೇಳೆ ಆತ ಸದನದ ಸುತ್ತಾ ಓಡಾಡಿ ಕೈಯಲ್ಲಿದ್ದ ಆಶ್ರುವಾಯು ಸಿಡಿಸಿ ಸದನದ ಒಳಗೆ ಫ್ಲೋರೋಸೆಂಟ್‌ ಬಣ್ಣದ ಅನಿಲವನ್ನು ಸಿಂಪಡಿಸಿದ್ದಾರೆ. ಸದ್ಯ ಕಲಾಪ ಮಧ್ಯಾಹ್ನಕ್ಕೆ ಮುಂದೂಡಲಾಗಿದೆ. ವಶಕ್ಕೆ ಪಡೆದವರಲ್ಲಿ ಓರ್ವ ಪುರುಷ  ಹಾಗೂ ಓರ್ವ ಮಹಿಳೆ ಸೇರಿದ್ದಾರೆ ಎನ್ನಲಾಗಿದೆ.

ಸಂಸತ್‌ ಮೇಲೆ ದಾಳಿ ನಡೆದು 22 ವರ್ಷವಾದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಹುತಾತ್ಮ ಭದ್ರತಾ ಸಿಬ್ಬಂದಿಗೆ ಗೌರವ ಸಲ್ಲಿಸಲಾಗಿತ್ತು.ಸಂಸತ್‌ ಒಳ ಪ್ರವೇಶಕ್ಕೆ ಪಾಸ್‌ ಇಲ್ಲದೇ ಯಾರನ್ನು ಬಿಡಲ್ಲ. ಹೀಗಿರುವಾಗ ಇಷ್ಟೊಂದು ದೊಡ್ಡ ಮಟ್ಟದ ಭದ್ರತಾ ಲೋಪ ನಡೆದಿದ್ದು ಹೇಗೆ ಎನ್ನುವುದೇ ಯಕ್ಷ ಪ್ರಶ್ನೆ.

About The Author

Leave a Reply