August 30, 2025
WhatsApp Image 2023-12-14 at 2.28.31 PM

ಪುತ್ತೂರಿನ ನಿವಾಸಿ ಡಿಆರ್ ಡಿಓ ಹೈದರಾಬಾದ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಯುವ ವಿಜ್ಞಾನಿ ಮನೆಯಲ್ಲಿ ನೇಣಿ ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೃತರನ್ನು ಪುತ್ತೂರಿನ ಕಲ್ಲರ್ಪೆ ನಿವಾಸಿ ಭರತ್ ಕಲ್ಲರ್ಪೆ(24) ಎಂದು ಗುರುತಿಸಲಾಗಿದೆ. ಈತ ಎರಡು ತಿಂಗಳ ಹಿಂದೆಯಷ್ಟೇ ಹೈದರಾಬಾದ್ ನಲ್ಲಿರುವ DRDO ಸಂಸ್ಥೆಗೆ ತಾತ್ಕಾಲಿಕ ನೆಲೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಈ ನಡುವೆ ಕಳೆದ ಒಂದು ವಾರದ ಹಿಂದೆ ಸಂಸ್ಥೆಗೆ ರಾಜೀನಾಮೆ ನೀಡಿ ಊರಿಗೆ ಬಂದಿದ್ದರು, ಆದರೆ ಸಂಸ್ಥೆಗೆ ರಾಜೀನಾಮೆ ಪತ್ರ ನೀಡಿದ್ದರೂ ರಾಜೀನಾಮೆ ಸ್ವೀಕಾರ ಮಾಡಿರಲಿಲ್ಲ ಎಂದು ತಿಳಿದು ಬಂದಿದೆ. ಈ ನಡುವೆ ನಿನ್ನೆ ರಾತ್ರಿ DRDO ಕಛೇರಿಯಿಂದ ಫೋನ್ ಬಂದಿತ್ತು ಎಂದು ಹೇಳಲಾಗಿದ್ದು, ಮನೆಯ ಸಮೀಪದ ತಮ್ಮ ತೋಟದ ಮರವೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಕುರಿತಂತೆ ಪುತ್ತೂರು ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Leave a Reply