Visitors have accessed this post 1422 times.
ಸುಳ್ಯ: 2022ರ ಜುಲೈ ತಿಂಗಳಿನಲ್ಲಿ ಬೆಳ್ಳಾರೆಯಲ್ಲಿ ನಡೆದಿದ್ದ ಬಿಜೆಪಿ ಜಿಲ್ಲಾ ಪದಾಧಿಕಾರಿ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿರುವ ಐವರು ಆರೋಪಿಗಳು ಪತ್ತೆಯಾದಲ್ಲಿ ಮಾಹಿತಿ ನೀಡುವಂತೆ ಎನ್ ಐಎ ಮನವಿ ಮಾಡಿದೆ.
ಆರೋಪಿಗಳಾದ ಎಂ.ಡಿ.ಮುಸ್ತಫ, ಮಸೂದ್ ಅಗ್ನಾಡಿ, ಮಸೂದ್ ಕೆ.ಎ, ಮೊಹಮ್ಮದ್ ಶರೀಫ್ ಕೊಡಾಜೆ, ಉಮ್ಮರ್ ಆರ್. ಉಮ್ಮರ್ ಫಾರೂಕ್, ಅಬೂಬಕ್ಕರ್ ಸಿದ್ದಿಕ್ ಈ ಎಲ್ಲಾ ಆರೋಪಿಗಳು ರಾಷ್ಟ್ರೀಯ ತನಿಖಾ ತಂಡದ ವಾಂಟೆಡ್ ಲಿಸ್ಟ್ ಪಟ್ಟಿಯಲ್ಲಿದ್ದಾರೆ.
ಒದಗಿಸಿದ ವಾಟ್ಸಾಪ್ (9497715294) ಸಂಖ್ಯೆಯನ್ನು ಸಂಪರ್ಕಿಸುವ ಮೂಲಕ ಈ ಆರೋಪಿಗಳು ಕಂಡುಬಂದಲ್ಲಿ ಅಥಾವ ಅವರ ಇರುವಿಕೆಯ ಕುರಿತಾಗಿ ಮಾಹಿತಿ ಇದ್ದಲ್ಲಿ ನೀಡುವಂತೆ ಸಾರ್ವಜನಿಕರನ್ನು ಎನ್ ಐಎ ವಿನಂತಿಸಿದೆ. ಮಾಹಿತಿ ನೀಡಿದವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ತಿಳಿಸಿದೆ.
2022ರ ಜು. 26ರಂದು ರಾತ್ರಿ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದ್ದು, ಎನ್ ಐಎ ಹಲವರನ್ನು ಬಂಧಿಸಿದ್ದು, ಇನ್ನೂ ಹಲವಾರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಎನ್ ಐಎ ನಿರಂತರ ತನಿಖೆ ಮುಂದುವರಿಸಿದೆ. ಹಲವು ಆರೋಪಿಗಳ ಹೆಸರಿನಲ್ಲಿ ಲುಕ್ ಔಟ್ ನೋಟಿಸ್ ಜಾರಿ ಮಾಡಿ ಬಹುಮಾನ ಘೋಷಿಸಿದೆ.