October 29, 2025
WhatsApp Image 2023-12-16 at 11.16.15 AM

ಸ್ವತಂತ್ರ ಸಿಕ್ಕು 75 ವರ್ಷ ಕಳೆದರೂ ಮುಸ್ಲಿಂ ಸಮುದಾಯದ ನಾಯಕರು ಸ್ಪೀಕರ್ ಆಗಿರಲಿಲ್ಲ ಆದರೆ ಕಾಂಗ್ರೆಸ್ ಈಗ ಅವಕಾಶ ಮಾಡಿಕೊಟ್ಟಿದ್ದು ಇದನ್ನೇ ಬಿಜೆಪಿಯವರು ಯಾಕೆ ಟಾರ್ಗೆಟ್ ಮಾಡುತ್ತಿದ್ದಾರೆ ಗೊತ್ತಿಲ್ಲ.ಬಿಜೆಪಿಯವರಿಗೆ ಮಾಡಲು ಬೇರೆ ಕೆಲಸವಿಲ್ಲ.

ಹಿಂದು-ಮುಸ್ಲಿಂ ಗಲಾಟೆ ಮಾಡಿಸುವುದೇ ಬಿಜೆಪಿಯವರ ಕೆಲಸ ಎಂದು ಸಚಿವ ಜಮೀರ್ ಅಹ್ಮದ್ ಟೀಕಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತೆಲಂಗಾಣ ಚುನಾವಣಾ ಪ್ರಚಾರದ ವೇಳೆ ಸ್ಪೀಕರ್‌ಗೆ ನಾವು ಸೇರಿದಂತೆ ಬಿಜೆಪಿಯವರೂ ಕೈ ಮುಗಿಯಬೇಕು ಅಂದಿದ್ದೆ. ಸ್ಪೀಕರ್‌ಗೆ ಸಿಎಂ ಸೇರಿದಂತೆ ಎಲ್ಲರೂ ಕೈಮುಗಿಯುತ್ತಾರೆ. ಅದರಲ್ಲಿ ತಪ್ಪೇನಿದೆ? ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ₹10 ಸಾವಿರ ಕೋಟಿ ಕೊಡುವುದಾಗಿ ಹೇಳಿದ್ದಾರೆ. ಇದು ಸ್ವಾಗತಾರ್ಹ, ಬಿಜೆಪಿಯವರು ಸಬ್ ಕಾ ವಿಕಾಸ್ ಅಂತಾ ಹೇಳಿ ಮುಸ್ಲಿಮರ ಅನುದಾನ ಕಡಿತ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಸಿಎಂ ಆಗಿ ಐದು ವರ್ಷ ಪೂರ್ಣಗೊಳಿಸುತ್ತಾರೆಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಯಾವತ್ತೂ ಸಿದ್ದರಾಮಯ್ಯನವರ ಪರವಾಗಿದ್ದೇನೆ. ಸದ್ಯಕ್ಕೆ ಸಿದ್ದರಾಮಯ್ಯನವರೇ ಸಿಎಂ ಆಗಿದ್ದಾರೆ, ಅವರೇ ಇರುತ್ತಾರೆ. ಸದ್ಯಕ್ಕೆ ಖುರ್ಚಿ ಖಾಲಿ ಇಲ್ಲ ಎಂದರು. ಎರಡೂವರೆ ವರ್ಷದ ನಂತರ ಡಿ.ಕೆ‌.‌ ಶಿವಕುಮಾರ್ ಸಿಎಂ ಆಗುತ್ತಾರೆಯೇ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಗಲಿಬಿಲಿಯಾಗಿದ್ದು ಕಂಡು ಬಂದಿತು.

About The Author

Leave a Reply