Visitors have accessed this post 1584 times.
ಉಳ್ಳಾಲ : ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಹರೇಕಳ ಗ್ರಾಮದ ರಾಜಗುಡ್ಡೆ ಎಂಬಲ್ಲಿ ನಡೆಯುತ್ತಿದ್ದ ಇಸ್ಪೀಟ್ ಜೂಜು ಅಡ್ಡೆಗೆ ಕೊಣಾಜೆ ಠಾಣಾ ಪಿಎಸ್ಐ ಅಶೋಕ್ ನೇತೃತ್ವದ ತಂಡ ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಅಂಬ್ಲ ಮೊಗರುವಿನ ಅನಿಲ್ ಡಿಸೋಜಾ(45), ಉಳ್ಳಾಲ ಕೋಡಿ ಡೌನ್ ರಸ್ತೆಯ ಹನೀಫ್ ಮಹಮ್ಮದ್(32), ಜಪ್ಪಿನ ಮೊಗರುವಿನ ಮಹಮ್ಮದ್ ನಾಜೀಮ್ (20) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಆರು ಪ್ಯಾಕೇಟ್ ಇಸ್ಪೀಟ್ ಎಲೆಗಳು, 6,750 ನಗದು ಹಣ, ಟರ್ಪಾಲ್, ಮೋಬೈಲ್ ಪೋನ್ ಮತ್ತು ಒಂದು ಸ್ಕೂಟಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಮೌಲ್ಯ 63,750 ಎಂದು ಅಂದಾಜಿಸಲಾಗಿದೆ.ಕೊಣಾಜೆ ಪೊಲೀಸ್ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷಕರಾದ ಬಾಲಕೃಷ್ಣ ಹೆಚ್ ಎನ್, ಪೊಲೀಸ್ ಉಪ ನಿರೀಕ್ಷಕರಾದ ನಾಗರಾಜ್ ಎಸ್, ಪುನೀತ್ ಗಾಂವಕಾರ್, ಅಶೋಕ್, ವಿನೋದ್, ಎಎಸ್ಐ ಸಂಜೀವ್ ಸಿಬ್ಬಂದಿಗಳಾದ, ಹೆಡ್ ಕಾನ್ಸ್ಟೇಬಲ್ ಗಣೇಶ್, ರೇಷ್ಮಾ, ಸಂತೋಷ್ ಕೆ.ಸಿ, ಸುರೇಶ್ ತಳವಾರ್, ಪ್ರಶಾಂತ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು