
ವಿಟ್ಲ: SSF ನಾರ್ಶ ಶಾಖೆ ಮತ್ತು ಸುನ್ನಿ ಯುವಕರ ಸಂಘ ನಾರ್ಶ ಇದರ ಜಂಟಿ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಲೇಡಿಗೋಶನ್ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ಕರ್ನಾಟಕ ಬ್ಲಡ್ ಸೈಬೋ ಇದರ 311ನೇ ರಕ್ತದಾನ ಶಿಬಿರ ಕಾರ್ಯಕ್ರಮ ದಿನಾಂಕ:24/12/2023 ರ ಆದಿತ್ಯವಾರ ಸಮಯ ಬೆಳಿಗ್ಗೆ:9.00 ರಿಂದ ಮಧ್ಯಾಹ್ನ 1.00 ರ ವರೆಗೆ ಹಯಾತುಲ್ ಇಸ್ಲಾಂ ಮದರಸ ಸಭಾಂಗಣ ಕೊಳ್ನಾಡು ನಾರ್ಶದಲ್ಲಿ ನಡೆಯಲಿದೆ,



ಈ ಕಾರ್ಯಕ್ರಮವನ್ನು ರಹ್ಮಾನಿಯ ಜುಮ್ಮಾ ಮಸೀದಿ ನಾರ್ಶ ಇದರ ಖತೀಬರಾದ ಸುಲೈಮಾನ್ ಮುಸ್ಲಿಯಾರ್ ಇವರ ನೇತೃತ್ವದಲ್ಲಿ,SSF ನಾರ್ಶ ಶಾಖೆಯ ಅಧ್ಯಕ್ಷರಾದ ಇಕ್ಬಾಲ್ ನಾರ್ಶ ಇವರ ಅಧ್ಯಕ್ಷತೆಯಲ್ಲಿ,ಹಮೀದ್ ಮದನಿ ಟಿ ನಾರ್ಶ ಇವರು ಉಧ್ಘಾಟಿಸಲಿದ್ದಾರೆ,ಕಾರ್ಯಕ್ರಮದಲ್ಲಿ ಮಹಮ್ಮದಲಿ ಸಖಾಫಿ ಅಶ್ ಅರಿಯ್ಯ,ಹಾಜಿ ಎನ್ ಸುಲೈಮಾನ್ ಸಿಂಗಾರಿ ನಾರ್ಶ,ಪ್ರಾಸ್ತವಿಕ ಭಾಷಣಕಾರರಾಗಿ ಎ.ಕೆ ನವಾಝ್ ಸಖಾಫಿ ಅಡ್ಯಾರ್ ಪದವು,ಮಾಜಿ ಸಚಿವರಾದ ಶ್ರೀ ಬಿ ರಮನಾಥ ರೈ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಎಂ,ಎಸ್ ಮಹಮ್ಮದ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಘಟಕದ ಜಿಲ್ಲಾಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ,SSF,SYS,KMJ ಸಂಘಟನೆಯ ನಾಯಕರು,ರಾಜಕೀಯ ನಾಯಕರು,ಪ್ರಗತಿ ಪರ ಕೃಷಿಕರು,ಊರಿನ ಹಿರಿಯರು,ಸಂಘಟನೆಯ ಕಾರ್ಯಕರ್ತರು ಭಾಗವಹಿಸಲಿದ್ದಾರೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳ ಬೇಕೆಂದು SSF ನಾರ್ಶ ಶಾಖೆ ಮತ್ತು ಸುನ್ನಿ ಯುವಕರ ಸಂಘದ ಪ್ರಕಟನೆಯಲ್ಲಿ ತಿಳಿಸಿದ್ದಾರೆ.