
ಬಂಟ್ವಾಳ : ಎರಡು ಲಾರಿಗಳು ಮುಖಾಮುಖಿ ಡಿಕ್ಕಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿಯ ನರಹರಿ ತಿರುವಿನಲ್ಲಿ ನಡೆದಿದೆ. ಘಟನೆಯಿಂದಾಗಿ ಲಾರಿಯ ಡಿಸೆಲ್ ಟ್ಯಾಂಕ್ ಗೆ ಹಾನಿಯಾಗಿ ರಸ್ತೆ ತುಂಬಾ ಡಿಸೆಲ್ ಹರಿದು ತಾಸುಗಟ್ಟಲೆ ಸಂಚಾರ ಅಸ್ತವ್ಯಸ್ತಗೊಂಡಿತು.



ಮಂಗಳೂರಿನಿಂದ ಕಲ್ಲಿದ್ದಲನ್ನು ಹೇರಿಕೊಂಡು ಬೆಂಗಳೂರಿನತ್ತ ತೆರಳುತ್ತಿದ್ದ ಲಾರಿ ಹಾಗೂ ಎದುರಿನಿಂದ ಬರುತ್ತಿದ್ದ ಟ್ರಾನ್ಸ್ ಪೋರ್ಟ್ ಸಂಸ್ಥೆಯ ಲಾರಿ ನರಹರಿ ಪರ್ವತದ ತಿರುವಿನಲ್ಲಿ ಮುಖಾಮುಖಿ ಡಿಕ್ಕಿಯಾಗಿ ಈ ಘಟನೆ ಸಂಭವಿಸಿದೆ. ಈ ಘಟನೆಯಲ್ಲಿ ಲಾರಿಯ ಡಿಸೆಲ್ ಟ್ಯಾಂಕ್ ಗೆ ಹಾನಿಯಾಗಿ ರಸ್ತೆ ತುಂಬಾ ಡಿಸೆಲ್ ಹರಡಿದ್ದು, ಒಂದು ಬದಿಯಿಂದ ಮೆಲ್ಕಾರ್ ವರೆಗೂ ಇನ್ನೊಂದು ಬದಿಯಿಂದ ಕಲ್ಲಡ್ಕವರೆಗೂ ಮುಂದೆ ಚಲಿಸಲಾಗದೆ ಸರತಿ ಸಾಲಿನಲ್ಲಿ ನಿಂತ ವಾಹನಗಳು. ಬಂಟ್ವಾಳ ಕೂಡಲೇ ಸ್ಥಳಕ್ಕೆ ಬೇಟಿ ನೀಡಿದ ಟ್ರಾಫಿಕ್ ಎಸ್.ಐ.ಸುತೇಶ್ ಅವರು ಅಗ್ನಿಶಾಮಕ ದಳದವರನ್ನು ಸ್ಥಳಕ್ಕೆ ಕರೆಸಿ ನೀರು ಹಾಯಿಸುವ ಮೂಲಕ ತೈಲವನ್ನು ಶುಚಿಗೊಳಿಸುವ ಕಾರ್ಯ ನಡೆಸಿದರು. ಬಂಟ್ವಾಳ ಟ್ರಾಫಿಕ್ ಪೋಲೀಸರು ಸ್ಥಳದಲ್ಲಿದ್ದು ಸಹಕರಿಸಿದರು. ತೈಲ ಶುಚಿಯಾದ ಬಳಿಕ ಅಪಘಾತಕ್ಕೊಳಗಾದ ಲಾರಿಗಳೆರಡನ್ನು ಕ್ರೇನ್ ಮೂಲಕ ಬದಿಗೆ ಸರಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.