Visitors have accessed this post 200 times.

ಕುಂಟಿನಿ ಭಾಗದಲ್ಲಿ ವೋಲ್ಟೇಜ್ ಸಮಸ್ಯೆ ಪರಿಹರಿಸಲು ಎಸ್‌ಡಿಪಿಐ ಮನವಿ

Visitors have accessed this post 200 times.

ಬೆಳ್ತಂಗಡಿ: ಲಾಯಿಲ ಗ್ರಾಮದ ಕುಂಟಿನಿ ಎಂಬಲ್ಲಿ ಸುಮಾರು 300 ಮನೆಗಳಿದ್ದು ಪಂಚಾಯತ್ ವತಿಯಿಂದ ನಳ್ಳಿನೀರಿನ ವ್ಯವಸ್ಥೆ ಇತ್ತು. ಆದರೆ ಇದೀಗ ಒಂದು ವಾರಗಳಿಂದ ಈ ಕುಂಟಿನಿ ಪ್ರದೇಶ ಗ್ರಾಮಸ್ಥರಿಗೆ ವೋಲ್ಟೇಜ್ ಸಮಸ್ಯೆಯಿಂದಾಗಿ ನೀರಿಗಾಗಿ ಪರದಾಟ ನಡೆಯುತ್ತಿದೆ. ಇದರ ಕುರಿತಾಗಿ ಇಲಾಖೆಯಲ್ಲಿ ವಿಚಾರಿಸಲಾದಾಗ ಅಲ್ಲಿನ ವೋಲ್ಟೇಜ್ ಬೇರೆ ಕೆಡೆಗೆ ಬದಲಾವಣೆ ಮಾಡಿದ್ದು ಎಂದು ತಿಳಿದು ಬಂತು.
ಆದುದರಿಂದ ನಿಮ್ಮ ಇಲಾಖೆಯಿಂದ ಬದಲಾವಣೆ ಮಾಡಿದ್ದಲ್ಲಿ ತಾವುಗಳು ಈ ಕೂಡಲೆ ಆ ನೊಂದ ಗ್ರಾಮಸ್ಥರ ಸಂಕಷ್ಟಕ್ಕೆ ನೆರವಾಗಿ ಯತಾಸ್ಥಿತಿಯನ್ನು ಕಾಯ್ದುಕೊಳ್ಳಬೇಕಾಗಿ ಗ್ರಾಮಸ್ಥರ ಪರವಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್‌ ಇಂಡಿಯಾ ಲಾಯಿಲ ಗ್ರಾಮ ಸಮಿತಿಯ ನಿಯೋಗ ಉಜಿರೆ ಮೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕಾರ್ಯನಿರ್ವಾಹಕ ಅಭಿಯಂತರರು ಈ ವಿಚಾರದಲ್ಲಿ ಮೇಲಿನ ಇಲಾಖೆಗೆ ಸೇರಿದಂತೆ ಸಂಬಂಧಪಟ್ಟವರೊಂದಿಗೆ ಮಾತನಾಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಲಾಯಿಲ ಪಂಚಾಯತ್ ಸದಸ್ಯರು ಸಲೀಂ ಕುಂಟಿನಿ ಹಾಗೂ ಬ್ಲಾಕ್ ಸಮಿತಿಯ ಸದಸ್ಯರಾದ ಸಾಹುಲ್ ಕ್ಯು.ಟಿ.ಎಫ್, ಮುಹಮ್ಮದ್ ಆಲಿ, ಸಲೀಂ ಕುಂಟಿನಿ, ಸಹಲ್ ನೀರ್ಸಾಲ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *