Visitors have accessed this post 615 times.
ಕಾಂಗ್ರೆಸ್ ಪಕ್ಷವನ್ನು ಟಿಪ್ಪು ಪರ ಎನ್ನುವವರು ಬ್ರಿಟಿಷರ ಬೂಟು ನೆಕ್ಕೋರು ಎಂದು ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಟಿಪ್ಪು ಫಾಲೋ ಮಾಡ್ತೀವೋ ಇಲ್ಲವೋ ಆದರೆ ನಾವು ಬ್ರಿಟಿಷರ ಬೂಟು ನೆಕ್ಕೋರ ವಿರೋಧ ಇದ್ದೇವೆ.
ಬಿಜೆಪಿಯವರು ಗೋಡ್ಸೆ ಅನುಯಾಯಿಗಳು ಎಂದು ಹೇಳಿಕೆ ನೀಡಿದ್ದಾರೆ.
ನೀವು ಏನಾದ್ರೂ ಹೇಳಿ ನಾವು ಟಿಪ್ಪು ಪರ ಇಲ್ಲ. ಬಿಜೆಪಿಯವರು ಬೂಟೂ ನೆಕ್ಕಿದವರು. ಕಾಂಗ್ರೆಸ್ ನವರು ಸ್ವಾತಂತ್ರ್ಯದಲ್ಲಿ ಭಾಗಿಯಾಗಿದ್ದರು. ಬಿಜೆಪಿಯವರು ಯಾರೂ ಸ್ವಾತಂತ್ರ್ಯ ಹೋರಾಟದಲ್ಲ ಭಾಗಿಯಾಗಿಲ್ಲ. ಅವರು ಬ್ರಿಟಿಷರ ಬೂಟು ನೆಕ್ಕೋರು. ಕಾಂಗ್ರೆಸ್ ನವರು ಸ್ವಾತಂತ್ರ್ಯ ಹೋರಾಟಗಾರರ ಪರ ಇರುವವರು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.