August 30, 2025
WhatsApp Image 2023-12-25 at 3.26.10 PM

ಯೋಧ್ಯೆ ರಾಮಮಂದಿರ 2024ರ ಜನವರಿ 22ರಂದು ಲೋಕಾರ್ಪಣೆಗೊಳ್ಳಲಿದೆ. ಈ ಹಿನ್ನಲೆಯಲ್ಲಿ ಖ್ಯಾತ ಯೂಟ್ಯೂಬರ್ ಶಬನಮ್ ಶೇಖ್ ಅವರ ಮುಂಬೈನಿಂದ ಅಯೋಧ್ಯೆಗೆ ಕಾಲ್ನಡಿಗೆಯಲ್ಲಿ ಹೊರಟಿದ್ದಾರೆ. ಇವರು ಭುಜದ ಮೇಲೆ ಕೇಸರಿ ಧ್ವಜ ಹಿಡಿದು ಬೆನ್ನ ಮೇಲೆ ರಾಮ ಮಂದಿರದ ಚಿತ್ರ ಮತ್ತು ಜೈ ಶ್ರೀರಾಮ್ ಘೋಷಣೆಯುಳ್ಳ ಬ್ಯಾನರ್‌ನೊಂದಿಗೆ ಕಾಲ್ನಡಿಗೆ ಮೂಲಕ ಪ್ರಯಾಣ ಆರಂಭಿಸಿ ಜೈ ಶ್ರೀರಾಮ್ ಎಂದು ಕೂಗುತ್ತಾರೆ.

ಸನಾತನಿ ಮುಸ್ಲಿಂ ಎಂದು ಕರೆದುಕೊಳ್ಳುವುದೇ ಶಬನಮ್ ಶೇಖ್ ಅವರ ಗುರಿಯಂತೆ. ಶಬನಮ್​​ಗೆ ಇಬ್ಬರು ಸ್ನೇಹಿತರು ಕೂಡ ಸಾಥ್ ನೀಡಿದ್ದಾರೆ.

ಇದುವರೆಗೂ ಸುಮಾರು 100 ಕಿಲೋಮೀಟರ್​ನಷ್ಟು ಪ್ರಯಾಣ ಮುಗಿಸಿರುವ ಶಬನಮ್ ದಾರಿಯುದ್ದಕ್ಕೂ ರಾಮಭಕ್ತರನ್ನು ಭೇಟಿ ಮಾಡಿ ಅವರೊಂದಿಗೆ ಕುಣಿದು, ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಮುಂದುವರಿಯುತ್ತಿದ್ದಾರೆ. ತನ್ನನ್ನು ತಾನು ಸನಾತನಿ ಮುಸ್ಲಿಂ ಎಂದು ಕರೆದುಕೊಳ್ಳುವ ಈಕೆ ತನ್ನ ಜೀವನದ ಏಕೈಕ ಗುರಿ ರಾಮಲಲ್ಲಾನ ದರ್ಶನ ಮಾಡುವುದು ಎಂದಿದ್ದಾರೆ.

About The Author

Leave a Reply