ಮಂಗಳೂರು: 750 ಮೆಟ್ರಿಕ್ ಟನ್ ಅನಧಿಕೃತ ಮರಳು ದಾಸ್ತಾನು ವಶಕ್ಕೆ

ಮಂಗಳೂರು: ನಗರದ ಕಣ್ಣೂರು ಗ್ರಾಮದ ಬಡ್ಲ ಗುತ್ತು ಎಂಬಲ್ಲಿ ಅನಧಿಕೃತವಾಗಿ ದಾಸ್ತಾನು ಇರಿಸಿದ್ದ 750 ಮೆಟ್ರಿಕ್ ಟನ್ ಮರಳು ರಾಶಿಯನ್ನು ವಶಪಡಿಸಿಕೊಳ್ಳಲಾಗಿದೆ. ಖಚಿತ ಮಾಹಿತಿಯ ಮೇರೆಗೆ ಬುಧವಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕ ಇ.ಸಿ ದ್ವಿತೀಯ, ಹಿರಿಯ ಭೂವಿಜ್ಞಾನಿ ಕೆ.ಎಂ ನಾಗಭೂಷಣ್ ಹಾಗೂ ಭೂವಿಜ್ಞಾನಿಗಳು ಸ್ಥಳಕ್ಕೆ ದಾಳಿ ಮಾಡಿದ್ದಾರೆ. ಈ ವೇಳೆ ಸ್ಥಳದಲ್ಲಿ ಅಕ್ರಮವಾಗಿ ಮರಳನ್ನು ದಾಸ್ತಾನು ಇರಿಸಿದ್ದು ಕಂಡಿ ಬಂದಿದೆ. ಆದ್ದರಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ 750 ಮೆಟ್ರಿಕ್ ಟನ್ ಮರಳನ್ನು ವಶಕ್ಕೆ ಪಡೆದುಕೊಂಡಿದೆ.

Leave a Reply