ಸ್ಪೀಕರ್ ಯು.ಟಿ ಖಾದರ್ ರವರಿಂದ ಪಣಂಬೂರು ಬೀಚ್ ನಲ್ಲಿ ತೇಲುವ ಸೇತುವೆಗೆ ಚಾಲನೆ

ಮಂಗಳೂರು : ಪಣಂಬೂರು ಅಂತರಾಷ್ಟ್ರೀಯ ಬೀಚ್‍ನಲ್ಲಿ ತೇಲುವ ಸೇತುವೆ ಪ್ರವಾಸಿಗರಿಗೆ ಹೊಸ ಆಕರ್ಷಣೆಯಾಗಿದ್ದು ಇದರ ಅಧಿಕೃತ ಉದ್ಘಾಟನೆ ನಡೆಯಿತು. ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ ತೇಲುವ ಸೇತುವೆಯನ್ನು ಉದ್ಘಾಟಿಸಿ, ಬೀಚ್ ಪ್ರವಾಸೋಧ್ಯಮಕ್ಕೆ ಸರಕಾರವು ಎಲ್ಲಾ ರೀತಿಯ ಸಹಕಾರ ನೀಡುವ ಬಗ್ಗೆ ಪ್ರವಾಸೋಧ್ಯಮ ಸಚಿವರಲ್ಲಿ ಮಾತುಕತೆ ನಡೆಸಲಾಗುವುದು ಎಂದರು.

 

ಬೃಹತ್ ಅಲೆಗಳ ನಡುವೆ ತೇಲುವ ಸೇತುವೆಯಲ್ಲಿ ಪ್ರವಾಸಿಗರು ನಡೆದಾಡಿ ಸಂಭ್ರಮಿಸಿದರು. ಮಲ್ಪೆ ಬೀಚ್ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಬೀಚ್‍ನಲ್ಲಿ ಇದೇ ಮೊದಲ ತೇಲುವ ಸೇತುವೆಯಾಗಿದೆ. ಪ್ರತೀ ವ್ಯಕ್ತಿಗೆ ರೂಪಾಯಿ 150 ದರ ವಿಧಿಸಲಾಗುತ್ತಿದ್ದು, ಮಕ್ಕಳಿಗೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಟಿಕೆಟ್ ನೀಡಲಾಗುತ್ತಿದೆ. ಇದು ಸುಮಾರು 150 ಮೀಟರ್ ಉದ್ದವಿರುವ ತೇಲುವ ಸೇತುವೆಯಾಗಿದ್ದು, 50 ಕ್ಕೂ ಹೆಚ್ಚು ಪ್ರವಾಸಿಗರು ಏಕಕಾಲದಲ್ಲಿ ಸೇತುವೆಯ ತುದಿಯಲ್ಲಿ ನಿಂತು ಸೂರ್ಯಾಸ್ತವನ್ನು ನೋಡಬಹುದಾಗಿದೆ. ಇನ್ನು ಇಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ತೇಲುವ ಸೇತುವೆಯ ಉದ್ದಕ್ಕೂ ಒಟ್ಟು 12 ಮಂದಿ ಲೈಫ್ ಗಾರ್ಡ್ಸ್ ಪ್ರವಾಸಿಗರ ಸುರಕ್ಷತೆಗೆ ನೇಮಿಸಲಾಗಿದೆ ಜೊತೆಗೆ ಪ್ರವಾಸಿಗರಿಗೆ ಲೈಫ್ ಜಾಕೆಟ್ ಅನ್ನು ಕಡ್ಡಾಯ ಮಾಡಲಾಗಿದೆ. ಇಲ್ಲಿನ ಬೀಚ್ ಅನ್ನು ಸರಕಾರ ಮತ್ತು ಖಾಸಗೀ ಸಹಭಾಗಿತ್ವದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ.

Leave a Reply