ನವದೆಹಲಿ: ದೇಶದಲ್ಲಿ ಕಳೆದ ಕೆಲವು ದಿನಗಳಿಂದ ಕೋವಿಡ್–19ನ ಹೊಸ ರೂಪಾಂತರಿ ಜೆಎನ್.1 ಸೋಂಕು ಅತೀ ವೇಗವಾಗಿ ಹರಡುತ್ತಿದ್ದು, ಇದೀಗ 24 ಗಂಟೆಗಳಲ್ಲಿ 162 ಹೊಸ ಪ್ರಕರಣಗಳು ಪತ್ತೆಯಾಗಿದೆ.
ಕೇರಳದಲ್ಲಿ ಗರಿಷ್ಠ 83, ಗುಜರಾತ್‌ನಲ್ಲಿ 34 ಪ್ರಕರಣಗಳು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಇದರೊಂದಿಗೆ ಕೆಲ ರಾಜ್ಯಗಳಲ್ಲಿ ರೂಪಾಂತರಿ JN.1 ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಒಂಬತ್ತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲೂ ರೂಪಾಂತರಿ ತಳಿ ಪತ್ತೆಯಾಗಿದೆ. ಗೋವಾದಲ್ಲಿ 18, ಕರ್ನಾಟಕದಲ್ಲಿ 8, ಮಹಾರಾಷ್ಟ್ರ–7, ರಾಜಸ್ಥಾನ–5, ತಮಿಳುನಾಡು–4, ತೆಲಂಗಾಣ–2 ಹಾಗೂ ದೆಹಲಿಯಲ್ಲಿ ಒಂದು ಪ್ರಕರಣಗಳು ದಾಖಲಾಗಿದೆ.
ಇನ್ನು ವಿಶ್ವ ಆರೋಗ್ಯ ಸಂಸ್ಥೆಯು JN.1 ರೂಪಾಂತರಿಯನ್ನು ಪ್ರತ್ಯೇಕ ತಳಿ ಎಂದೇ ಕರೆದಿದ್ದು, ಬಹು ವೇಗವಾಗಿ ಹರಡುವ ಈ ಸೋಂಕಿ ಆರೋಗ್ಯದ ಮೇಲೆ ಹೆಚ್ಚಿನ ತೊಂದರೆ ಉಂಟು ಮಾಡಬಹುದು ಎಂದು ಮಾಹಿತಿ ನೀಡಿದೆ