
ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ಪ್ರಭಾರ ಕುಲಪತಿಯಾಗಿರುವ ಪ್ರೊ.ಜಯರಾಜ್ ಅಮೀನ್ ಅವರ ಛಾಯಾಚಿತ್ರವನ್ನು ಬಳಸಿಕೊಂಡು ನಂಬರಿಂದ ವಾಟ್ಸಪ್ ಖಾತೆಯನ್ನು ಸೃಷ್ಟಿ ಮಾಡಿ ಹಲವು ಸಂದೇಶಗಳು ಪ್ರಾಧ್ಯಾಪಕರಿಗೆ ಹಾಗೂ ಇತರರಿಗೆ ರವಾನೆಯಾಗಿದ್ದು, ಈ ಕುರಿತು ಕುಲಪತಿಯವರು ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ.



ಶನಿವಾರ ಮಧ್ಯಾಹ್ನದಿಂದ ಇಂತಹ ಸಂದೇಶಗಳು ಈ ನಕಲಿ ಖಾತೆಯಿಂದ ರವಾನೆಯಾಗಿದ್ದು, ಈ ಬಗ್ಗೆ ಹಲವು ಪ್ರಾಧ್ಯಾಪಕರು ಕುಲಪತಿಯವರ ಗಮನಕ್ಕೆ ತಂದಿದ್ದರು. ಕೂಡಲೇ ಆರೋಪಿಗಳನ್ನು ಪತ್ತೆ ಹಚ್ಚಿ ಕಾನೂನುಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.