ಪಡುಮಲೆ ಜುಮ್ಮಾ ಮಸೀದಿಗೆ ತೆರಳಿದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್.

ಪುತ್ತೂರು: ಪಳ್ಳಿದೇವರು ಎಂದೇ ಖ್ಯಾತವಾದ ಪಡುಮಲೆ ಜುಮ್ಮಾ ಮಸೀದಿಗೆ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ಪುತ್ತೂರು ಚುನಾವಣಾ ಪ್ರಚಾರ ಸಮಿತಿ ಉಸ್ತುವಾರಿ ಕಾವು ಹೇಮನಾಥ ಶೆಟ್ಟಿ, ಜಿಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಮಸೀದಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಖತೀಬರಾದ ಸಂಶುದ್ದೀನ್ ದಾರಿಮಿ, ಅಬೂಬಕ್ಕರ್ ಹಾಜಿ, ಫಕ್ರುದ್ದೀನ್ ಹಾಜಿ, ಆದಂ ಹಾಜಿ, ಆಲಿ ಕುಂಞಿ, ಜುನೈದ್ ಬಡಗನ್ನೂರು, ಅಬ್ದುಲ್ ಕರೀಂ, ಆಬೀದ್ ಮೊದಲಾದವರು ಉಪಸ್ಥಿತರಿದ್ದರು.

Leave a Reply