ಬಂಟ್ವಾಳ: ಅಕ್ರಮ ಮರಳು ದಾಸ್ತಾನು ಇರಿಸಿದ್ದ ಸ್ಥಳಕ್ಕೆ ಪೊಲೀಸರಿಂದ ದಾಳಿ

ಬಂಟ್ವಾಳ: ಅಕ್ರಮವಾಗಿ ಮರಳು ದಾಸ್ತಾನು ಇರಿಸಿದ್ದ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೋಲೀಸರು ದಾಳಿ ನಡೆಸಿ ಮರಳನ್ನು ವಶಕ್ಕೆ ಪಡೆದುಕೊಂಡು ಇಬ್ಬರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಂಟ್ವಾಳ ಇರಾ ಗ್ರಾಮದ, ಕಂಚಿನಡ್ಕ ಎಂಬಲ್ಲಿ, ನೇತ್ರಾವತಿ ನದಿಯಿಂದ ಮರಳು ತೆಗೆದು ದಾಸ್ತಾನು ಮಾಡಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರಿಗೆ ಮಾಹಿತಿ ದೊರೆತಿದೆ. ಈ ಹಿನ್ನೆಲೆ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸ್ ನಿರೀಕ್ಷಕರಾದ ಶಿವಕುಮಾರ್ ಬಿ ಅವರು ಸಿಬ್ಬಂದಿಗಳೊಂದಿಗೆ ತೆರಳಿ ಪರಿಶೀಲಿಸಿದಾಗ, ಖಾಲಿ ಜಾಗದಲ್ಲಿ ಅಂದಾಜು 15,000 ರೂ. ಮೌಲ್ಯದ ಅಂದಾಜು 9 ಯುನಿಟ್ ನಷ್ಟು ಸಾಮಾನ್ಯ ಮರಳನ್ನು ದಿಣ್ಣೆ ಮಾಡಿ ದಾಸ್ತಾನು ಮಾಡಿರುವುದು ಕಂಡು ಬಂದಿದೆ.

ನೇತ್ರಾವತಿ ನದಿಯಿಂದ ಚರಣ್ ಮತ್ತು ಹೈದರ್ ಎಂಬವರು ಮರಳನ್ನು ಕಳವು ಮಾಡಿ, ಮಾರಾಟಕ್ಕಾಗಿ ಶೇಖರಿಸಿಟ್ಟಿರುವುದಾಗಿ ತಿಳಿದುಬಂದಿದೆ ಮುಂದಿನ ಕಾನೂನು ಕ್ರಮವಾಗಿ ಸದ್ರಿ ಮರಳನ್ನು ಸ್ವಾದೀನಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 379 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Leave a Reply