ಬಂಟ್ವಾಳದ ಸಮೀಪ ನೇತ್ರಾವತಿ ನದಿಯಲ್ಲಿ ಈಜಲು ಹೋದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬಂಟ್ವಾಳ ನರಿಕೊಂಬು ಗ್ರಾಮದ ಪೊಯಿತಾಜೆ ಎಂಬಲ್ಲಿ ಸಂಭವಿಸಿದೆ
ಸಾವನ್ನಪ್ಪಿದ ಯುವಕ ನರಿಕೊಂಬು ಗ್ರಾಮದ ಬೀರಕೋಡಿ ನಿವಾಸಿ ಆನುಶ್ (20) ಎಂದು ತಿಳಿಯಲಾಗಿದೆ.
ಭಾನುವಾರ ರಜಾದಿನವಾದ ಕಾರಣ ಸಹೋದರ ರೂಪೇಶ್ ಹಾಗೂ ಸ್ನೇಹಿತರಾದ ಕಿಸಾನ್, ಅನೀಶ್ ಜೊತೆಯಲ್ಲಿ ಅನುಶ್ ನದಿಗೆ ಈಜಲು ತೆರಳಿದ್ದರು. ಅವಘಡ ನಡೆದ ಕೂಡಲೇ ಅಗ್ನಿಶಾಮಕ ದಳದವರು ಘಟನಾ ಸ್ಥಳಕ್ಕೆ ಬಂದು ಮೃತದೇಹವನ್ನು ನದಿಯಿಂದ ಮೇಲಕ್ಕೆತ್ತಿದ್ದಾರೆ. ಇನ್ನು ಘಟನೆ ಸ್ಥಳಕ್ಕೆ ಬಂಟ್ವಾಳ ನಗರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.