ALERT: ಇಂದು ಬೀಚ್‌ಗಳಿಗೆ ಹೋಗಬೇಡಿ

ದಕ್ಷಿಣ ಕನ್ನಡ, ಉಡುಪಿ ಸೇರಿ ಕರಾವಳಿ ತೀರದಲ್ಲಿ ಸಮುದ್ರದ ಅಲೆಗಳು ಎತ್ತರಕ್ಕೆ ಏಳುವ ಸಾಧ್ಯತೆಯಿರುವ ಕಾರಣ ಮುನ್ನೆಚ್ಚರಿಕೆ ವಹಿಸಬೇಕೆಂದು ರಾಷ್ಟ್ರೀಯ ಸಮುದ್ರ ಸಂಶೋಧನಾ ಕೇಂದ್ರ(INCOIS ತಿಳಿಸಿದೆ.

ಅದರಂತೆ ಏ.2ರ ಮಧ್ಯರಾತ್ರಿವರೆಗೂ ಕಡಲು ಪ್ರಕ್ಷುಬ್ಧವಾಗಿರುವ ಸಾಧ್ಯತೆಯಿದೆ. ಈ ಅವಧಿಯಲ್ಲಿ 16-19 ಸೆಕೆಂಡ್‌ಗಳ ಅವಧಿಯಲ್ಲಿ 1.5 ಮೀಟರ್‌ ಎತ್ತರಕ್ಕೆ ಅಲೆಗಳು ದಡಕ್ಕೆ ಅಪ್ಪಳಿಸುವ ಅಪಾಯವಿದೆ.

ಈ ಹಿನ್ನಲೆಯಲ್ಲಿ ಯಾರೂ ಬೀಚ್‌ಗೆ ತೆರಳಬೇಡಿ ಎಂದು ಸೂಚಿಸಲಾಗಿದೆ. ಕೇರಳದ ಹಲವೆಡೆ ಈಗಾಗಲೇ ಅಪಾಯದ ಅಲೆಗಳಿಂದ ಸಮುದ್ರ ತೀರದ ಮನೆಗಳು ಕೊಚ್ಚಿ ಹೋಗಿವೆ.

Leave a Reply