
ಮಣಿಪಾಲ: ಖಾಸಗಿ ಬಸ್ಸಿನ ಡ್ಯಾಶ್ ಬಾಕ್ಸ್ ನಲ್ಲಿ ಡೀಸೆಲ್ ಗೆಂದು ಇಟ್ಟಿದ ಭಾರಿ ಮೊತ್ತದ ಹಣ ಕಳವಾದ ಪ್ರಕರಣ ಬೆಳಕಿಗೆ ಬಂದಿದೆ.



ಏಪ್ರಿಲ್ 1 ರಂದು ಮದ್ಯಾಹ್ನದ ವೇಳೆ ಸುಮಾರು 2 ರಿಂದ 3 ಗಂಟೆಯ ಆಸುಪಾಸು ನಿಲ್ಲಿಸಿದ್ದ ಬಸ್ಸಿನ ಡ್ಯಾಶ್ ಬಾಕ್ಸ್ ನಲ್ಲಿದ ಸುಮಾರು 96,500 ರೂ. ನಗದು ಹಣವನ್ನು ಬಸ್ ನ ಕ್ಲೀನರ್ ಅರುಣ್ ಸಜ್ಜನ್ ರಾಜ್ ಕಳ್ಳತನ ಮಾಡಿರುವುದಾಗಿ ಶಿವಳ್ಳಿ ಗ್ರಾಮದ ಶ್ರೀಕಾಂತ್ ರಾವ್ ಮಣಿಪಾಲ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪೊಲೀಸರು ತನಿಖೆ ನಡೆಸುತ್ತಿದ್ದಾರೆ.