
ಬಜಪೆ : ಮನೆಯ ಬೀಗ ಒಡೆದು ಒಳನುಗ್ಗಿ ಮನೆಯೊಳಗಿದ್ದ ಲಕ್ಷಾಂತರ ರೂ ಬೆಲೆಬಾಳುವ ವಸ್ತುಗಳನ್ನು ಕಳವು ಗೈದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.ಬಡಗ ಎಡಪದವಿನ ಬೆಟ್ಟು ಜ್ಞಾರ ಮನೆ ಉರ್ಕಿ ನಿವಾಸಿ ರವಿ ಶೆಟ್ಟಿ(55) ಹಾಗೂ ಮೂಡಬಿದಿರೆಯ ತೋಡಾರು ಗ್ರಾಮದ ಕಲ್ಯ ಸಂಕ ನಿವಾಸಿ ಶಿವ ಪ್ರಸಾದ್ ಶೆಟ್ಟಿ (29) ಬಂಧಿತ ಆರೋಪಿಗಳು ಬಂಧಿತ ಆರೋಪಿಗಳು ಬಡಗ ಎಡಪದವಿನಲ್ಲಿರುವ ಯುವರಾಜ್ ಆಚಾರ್ಯ ರವರ ಮನೆಯ ಬೀಗವನ್ನು ಒಡೆದು ಮನೆಯಲ್ಲಿದ್ದ ಸುಮಾರು 1,40,000 ರೂಪಾಯಿ ಬೆಲೆ ಬಾಳುವ ಕೇಬಲ್, ಪ್ಯಾನ್, ಬಾಗಿಲು, ಕಿಟಿಕಿ ಹಾಗೂ ಇನ್ನಿತರ ವಸ್ತುಗಳನ್ನು ಕಳವು ಮಾಡಿದ್ದು,ಈ ಬಗ್ಗೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಜಪೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ನಂದೇಶ್ ಬಿ ಕುಂಬಾರ ರವರು ತಂಡವು ಆರೋಪಿಗಳನ್ನು ಶುಕ್ರವಾರದಂದು ಮೂಡಬಿದ್ರೆ ಸ್ವರಾಜ್ ಮೈದಾನ ಬಳಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳಿಂದ ಕಳವು ಮಾಡಿದ ಎಲ್ಲಾ ಸೊತ್ತುಗಳನ್ನು ಪೊಲೀಸರು ಸ್ವಾಧೀನ ಪಡಿಸಿಕೊಂಡಿದ್ದಾರೆ. ಸ್ವಾಧೀನ ಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 1,40,000/- ರೂಪಾಯಿ ಆಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


