August 30, 2025
WhatsApp Image 2024-04-07 at 3.01.38 PM

ಕಾಸರಗೋಡು: ನಾಲ್ಕು ತಿಂಗಳ ಹೆಣ್ಣು ಮಗುವನ್ನು ಕೊಲೆ ಗೈದ ಬಳಿಕ ತಾಯಿ ಕೈಯ ನರ ಕತ್ತರಿಸಿ ನೇಣು ಬಿಗಿದು ಆತ್ಮಹತ್ಯೆಗೈದ ದಾರುಣ ಘಟನೆ ಕಾಸರಗೋಡಿನ ಮುಳ್ಳೇರಿಯ ಸಮೀಪ ಸಂಭವಿಸಿದೆ. ‌

ಇಡುಕ್ಕಿ ತೊಡುಪುಳ ನಿವಾಸಿ ಶರತ್‌ ಅವರ ಪತ್ನಿ ಬಿಂದು (28) ಆತ್ಮಹತ್ಯೆ ಮಾಡಿಕೊಂಡವರು. ಅವರ ನಾಲ್ಕು ತಿಂಗಳ ಹೆಣ್ಣು ಮಗುವಿನ ಹೆಸರು ಶ್ರೀನಂದಾ. ಶರತ್‌ ಇಸ್ರೇಲ್‌ನಲ್ಲಿ ಉದ್ಯೋಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಬಿಂದು ತೊಡುಪುಳದಲ್ಲಿರುವ ಪತಿಯ ಮನೆಯಿಂದ ಪುತ್ರಿ ಶ್ರೀನಂದ ಮತ್ತು ಪುತ್ರ ಶ್ರೀಹರಿಯೊಂದಿಗೆ ಕಳೆದ ಆದಿತ್ಯವಾರ ಮುಳಿಯಾರು ಬಳಿಯ ಕೋಪಾಳಕೊಚ್ಚಿಗೆ ಬಂದಿದ್ದರು.
ಎ.5ರಂದು ಮಧ್ಯಾಹ್ನ ಬಿಂದು ಮನೆ ಪಕ್ಕದ ಮರದಲ್ಲಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿ ಯಲ್ಲಿ ಪತ್ತೆಯಾಗಿದ್ದು, ಅವರ ಕೈಯ ನರ ಕತ್ತರಿಸಲ್ಪಟ್ಟು ರಕ್ತ ಒಸ ರುತ್ತಿತ್ತು. ಇದೇ ವೇಳೆ ಮಗು ಶ್ರೀನಂದ ಮನೆಯ ಮಲಗುವ ಕೊಠಡಿಯಲ್ಲಿ ಗಂಭೀರಾವಸ್ಥೆಯಲ್ಲಿ ಕಂಡು ಬಂದಿದ್ದು, ಅದನ್ನು ಕಂಡ ಮನೆಯವರು ಮಗುವನ್ನು ಚೆಂಗಳ ಸಹಕಾರಿ ಆಸ್ಪತ್ರೆಗೆ ಸಾಗಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಬಿಂದು ಮತ್ತು ಶರತ್‌ ಅವರ ವಿವಾಹ ಆರು ವರ್ಷಗಳ ಹಿಂದೆ ನಡೆದಿತ್ತು.
ವಿಷಯ ತಿಳಿದ ಕಾಸರಗೋಡು ತಹಶೀಲ್ದಾರ್‌ ಪಿ.ಎಂ.ಅಬೂಬಕ್ಕರ್‌ ಸಿದ್ದಿಕ್‌, ಕಾಸರಗೋಡು ಡಿವೈಎಸ್‌ಪಿ ಜಯನ್‌ ಡೊಮಿನಿಕ್‌ ಹಾಗೂ ಆದೂರು ಪೊಲೀಸ್‌ ಇನ್‌ಸ್ಪೆಕ್ಟರ್‌ ಸಂಜಯ್‌ ಕುಮಾರ್‌ ಸ್ಥಳಕ್ಕೆ ಧಾವಿಸಿ ತನಿಖೆ ನಡೆಸಿದ್ದು ಅವರ ನೇತೃತ್ವದಲ್ಲಿ ಮಹಜರು ನಡೆಸಿದ ಬಳಿಕ ಮೃತದೇಹಗಳನ್ನು ಉನ್ನತ ಮಟ್ಟದ ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಗಿದೆ.
ಸಾವಿಗೆ ಕಾರಣ ಇನ್ನಷ್ಟೇ ತಿಳಿಯ ಬೇಕಿದ್ದು, ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ.

About The Author

Leave a Reply