ಚಪ್ಪಲಿ ಹಾರ ಹಾಕಿಕೊಂಡು ಮತಯಾಚನೆ..!

ಉತ್ತರ ಪ್ರದೇಶದಲ್ಲಿ ಚುನಾವಣ ಕಾವು ತೀವ್ರವಾಗಿ ಏರಿದ್ದು ರಾಷ್ಟ್ರೀಯ ಪಕ್ಷಗಳ ಪ್ರಚಾರದ ಭರಾಟೆಯ ನಡುವೆ ಪಕ್ಷೇತರ ಅಭ್ಯರ್ಥಿಯೊಬ್ಬ ವಿಶಿಷ್ಟವಾಗಿ ಮತಯಾಚನೆ ಮಾಡುವ ಮೂಲಕ ಗಮನ ಸೆಳೆದಿದ್ದು ವಿಡಿಯೋ ಕೂಡ ವೈರಲ್ ಆಗಿದೆ.

ಅಲಿಗಢದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅಭ್ಯರ್ಥಿ ಪಂಡಿತ್ ಕೇಶವ್ ದೇವ್ ಅವರಿಗೆ ಚುನಾವಣ ಚಿಹ್ನೆಯಾಗಿ ‘ಚಪ್ಪಲಿ’ಯನ್ನು ಚುನಾವಣ ಆಯೋಗ ನಿಗದಿಪಡಿಸಿದೆ.

 

ಚಿಹ್ನೆ ಸಿಕ್ಕಿದ ಬಳಿಕ ಹೊಸ ಮಾದರಿಯಲ್ಲಿ ಪ್ರಚಾರ ಮುಂದುವರಿಸಿರುವ ಕೇಶವ್ ದೇವ್ ಕೊರಳಿಗೆ 7 ಚಪ್ಪಲಿಗಳ ಹಾರ ಹಾಕಿಕೊಂಡು ಜನರ ಬಳಿ ಮತ ಯಾಚಿಸುತ್ತಿದ್ದಾರೆ. ಮತದಾರರೂ ಪುಕ್ಕಟೆಯಾಗಿ ಎಂಜಾಯ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ವಿಭಿನ್ನ ಪ್ರಚಾರ ಎಲ್ಲರ ಗಮನ ಸೆಳೆದಿದೆ.

Leave a Reply