ಬೆಳ್ತಂಗಡಿ ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ವಿರುದ್ಧ ಎಸ್‌ಡಿಪಿಐ ಪಕ್ಷದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ದಾಖಲು.

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆ ನಡೆಸಿರುವ ವಿರುದ್ದ ದೂರು ದಾಖಲಿಸಿ ಕ್ರಮ ಕೈಗೊಳ್ಳುವಂತೆ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಬೆಳ್ತಂಗಡಿ ಕ್ಷೇತ್ರ ಸಮಿತಿ ವತಿಯಿಂದ ದೂರು ದಾಖಲಿಸಲಾಗಿದೆ.

ತಾಲೂಕು ವ್ಯಾಪ್ತಿಯಲ್ಲಿ ಬರುವ ಬೆಳಾಲು ಮತ್ತು ಬೊಲ್ಲೂರಿನಲ್ಲಿ ಪರವಾನಿಗೆ ನೆಪ ಹೇಳಿ ಹೊಳೆಯಲ್ಲಿ ಅಕ್ರಮವಾಗಿ ಇಟಾಚಿ ಬಳಸಿ ಘನ ವಾಹನಗಳಿಗೆ ಅಕ್ರಮವಾಗಿ ಮರಳನ್ನು ತುಂಬಿಸಿ ಪಂಚಾಯತ್ ರಸ್ತೆಯಲ್ಲಿ ಬರುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಇದಲ್ಲದೆ ಇದೇ ಠಾಣಾ ವ್ಯಾಪ್ತಿಗೆ ಬರುವ ಗುರಿಪಳ್ಳ ಎಂಬಲ್ಲಿ ಯಾವುದೇ ಪರವಾಣಿಗೆ ಇಲ್ಲದೆ ರಾಜಾರೋಷಾವಾಗಿ ಅಕ್ರಮ ಮರಳು ತೆಗೆಯುತ್ತಿದ್ದು, ಇದನ್ನು ಕಂಡು ಕಾಣದ ರೀತಿ ಠಾಣಾಧಿಕಾರಿಗಳು ವರ್ತಿಸುತ್ತಿರುವುದು ವಿಪರ್ಯಾಸ. ಹಾಗೇನೇ ವೇಣೂರು ಠಾಣಾವ್ಯಾಪ್ತಿಗೆ ಒಳಪಟ್ಟ ಅಂಡಿಂಜೆ ಎಂಬಲ್ಲಿ ಪರವಾಣಿಗೆ ಇದೆ ಎಂಬ ನೆಪ ಹೇಳಿ ಇಟಾಚಿ ಮತ್ತುಘನ ಗಾತ್ರದ ಯಂತ್ರೋಪಕರಣಗಳನ್ನು ಬಳಸಿ ನೈಸರ್ಗಿಕ ಸಂಪತ್ತನ್ನು ನಾಶಪಡಿಸುತಿದ್ದಾರೆ.

ಇದೇ ರೀತಿ ಧರ್ಮಸ್ಥಳ ಠಾಣಾವ್ಯಾಪ್ತಿಗೆ ಒಳಪಟ್ಟ ಪುದುವೆಟ್ಟು, ಧರ್ಮಸ್ಥಳ ದ ನೇತ್ರವತಿ ಮತ್ತು ಚಾರ್ಮಾಡಿಯಲ್ಲಿ ಅಕ್ರಮವಾಗಿ ಮರಳು ತೆಗೆಯುವುದು ಮಾತ್ರವಲ್ಲದೆ ಪ್ರತಿನಿತ್ಯ ಬಿಸಿರೋಡ್ ಕಡೆಯಿಂದ ಚಾರ್ಮಾಡಿ ಚೆಕ್ ಪೋಸ್ಟ್ ಮೂಲಕ ಯಾವುದೇ ಪರವಾಣಿಗೆ ಇಲ್ಲದೆ ರಾತ್ರಿ ಹಗಲು ರಾಜಾರೋಷವಾಗಿ ಮರಳು ತುಂಬಿದ ಲಾರಿಗಳು ಮೂಡಿಗೆರೆ ಕಡೆಗೆ ಈ ಚುನಾವಣಾ ಸಂದರ್ಭದಲ್ಲಿ ಕೂಡ ಹೋಗುತ್ತಿರುವುದು ಸಾರ್ವಜನಿಕರಲ್ಲಿ ಪೋಲೀಸರ ಮೇಲೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಪರವಾಣಿಗೆ ಇದೆ ಎಂದು ಕಾನೂನು ಬಾಹಿರವಾಗಿ ಇಟಾಚಿ ಯಂತ್ರಗಳು ಹೊಳೆಯಲ್ಲಿ ಕಂಡುಬಂದರೆ ಇಲಾಖೆಗಳ ವಿರುದ್ಧ ಮಾಧ್ಯಮ ಮಿತ್ರರನ್ನು ಕರೆಸಿ ಗ್ರಾಮಸ್ಥರನ್ನು ಸೇರಿಸಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಎಸ್‌ಡಿಪಿಐ ಪಕ್ಷ ನೀಡಿದೆ.

ಆದ್ದರಿಂದ ತಾವುಗಳು ಈ ರೀತಿಯ ಅಕ್ರಮ ಚಟುವಟಿಕೆಗಳ ಬಗ್ಗೆ ಸೂಕ್ತ ರೀತಿಯ ತನಿಖೆ ನಡೆಸಿ ಮತ್ತು ಈ ಅಕ್ರಮ ಚಟುವಟಿಕೆಗಳಿಗೆ ಸಹಕರಿದ ಅಧಿಕಾರಿಗಳಿಗೆ ವಿರುದ್ಧ ಸೂಕ್ತ ಕಾನೂನು ಕೈಗೊಳ್ಳಬೇಕಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ನೀಡಿದ ದೂರಿನಲ್ಲಿ ಎಸ್‌ಡಿಪಿಐ ಕ್ಷೇತ್ರ ಅಧ್ಯಕ್ಷರಾದ ನವಾಝ್ ಕಟ್ಟೆ ಆಗ್ರಹಿಸಿದ್ದಾರೆ.

Leave a Reply