August 30, 2025
WhatsApp Image 2024-04-10 at 9.31.11 AM

ಮಂಗಳೂರು:  ಎಲ್ಲ ಕಡೆ ಕಾಂಗ್ರೆಸ್ ಬದಲಾವಣೆಯ ಗಾಳಿ ಬೀಸತೊಡಗಿದೆ , ಅದು ಕರಾವಳಿಯಿಂದಲೇ ಆರಂಭ : ದಿನೇಶ್ ಗುಂಡೂರಾವ್ ಮಂಗಳೂರು: ಸಮಾಜದ ಪ್ರತಿಯೊಬ್ಬರು ಅಭಿವೃದ್ಧಿಯಾಗಬೇಕು. ಈ ನಿಟ್ಟಿನಲ್ಲಿ ಸರಕಾರ ಕೆಲಸ ಮಾಡುತ್ತಿಲಿದೆ. ಇದೀಗ ಎಲ್ಲ ಕಡೆ ಕಾಂಗ್ರೆಸ್ ಬದಲಾವಣೆಯ ಗಾಳಿ ಬೀಸತೊಡಗಿದೆ. ಅದು ಕರಾವಳಿಯಿಂದಲೇ ಆರಂಭವಾಗಿದೆ ಎನ್ನುವುದು ಸಂತೋಷದ ವಿಷಯ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ನಗರದ ಓಷಿಯನ್ ಪರ್ಲ್’ನಲ್ಲಿ ಹಿಂದುಳಿದ ವರ್ಗಗಳಾದ ಗಟ್ಟಿ, ಕುಲಾಲ್, ವಿಶ್ವಕರ್ಮ, ಮೊಗವೀರ, ದೇವಾಡಿಗ, ಕ್ರೈಸ್ತ, ಬ್ರಾಹ್ಮಣ, ಬಲ್ಯಾಯ, ಜಿಎಸ್‌ಬಿ., ಎಸ್‌ಸಿ., ಎಸ್‌ಟಿ., ಜೋಗಿ, ರಾಮ ಕ್ಷತ್ರೀಯಾ, ಗಾಣಿಗ, ಸವಿತಾ, ಮಡಿವಾಳ ಸಮುದಾಯಗಳ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು ನೀವು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದೀರಿ. ನ್ಯಾಯಯುತ ಬದುಕಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಹಿಂದುಳಿದ ವರ್ಗಗಳ ಸಮಸ್ಯೆಗಳನ್ನು ತಿಳಿದುಕೊಳ್ಳುವ ದಿಶೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ನೇತೃತ್ವದಲ್ಲಿ ಸಮಾಲೋಚನಾ ಸಭೆ ಕರೆಯಲಾಗಿದೆ. ಸಮಾಜದ ಅಭಿವೃದ್ಧಿ, ಬೇಡಿಕೆಗಳ ಬಗ್ಗೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆ. ದೈವ ದೇವರುಗಳ ನೆಲೆಬೀಡಾದ ಈ ನೆಲದಲ್ಲಿ ಸಂಪ್ರದಾಯಕ್ಕೆ ಬೆಲೆ ಸಿಗುವಂತಾಗಬೇಕು. ಸಾಮಾಜಿಕ ನ್ಯಾಯ ನೀಡುವಲ್ಲಿ ಬದ್ಧತೆ ಇರುವ ಪಕ್ಷ ಕಾಂಗ್ರೆಸ್. ಮುಂದೆ ಪ್ರತಿ ಮೂರು ತಿಂಗಳಿಗೊಮ್ಮೆ ಅಧಿಕಾರಿಗಳ ಜೊತೆ ಇದೇ ರೀತಿಯ ಸಮಾಲೋಚನಾ ಸಭೆ ನಡೆಸಲಾಗುವುದು. ಹಿಂದುಳಿದ ವರ್ಗಗಳ ಧ್ವನಿಯಾಗಿ ಕೆಲಸ ನಿರ್ವಹಿಸುತ್ತೇನೆ ಎಂದರು.

About The Author

Leave a Reply