August 30, 2025
WhatsApp Image 2024-04-11 at 12.23.40 PM

ಉಡುಪಿ: ನೇಜಾರಿನಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಆರೋಪಿ ಪ್ರವೀಣ್ ಚೌಗುಲೆಯನ್ನು ವೀಡಿಯೋ ಕಾನ್ಸರೆನ್ಸ್ ಮೂಲಕ ನ್ಯಾಯಾಧೀಶರ ಎದುರು ಹಾಜರುಪಡಿಸಲಾಯಿತು.

ಈ ಪ್ರಕರಣವನ್ನು ಉಡುಪಿ ಸೆಷನ್ಸ್ ಕೋರ್ಟ್ ನಿಂದ ಬೆಂಗಳೂರಿನ ಸೆಷನ್ಸ್ ಕೋರ್ಟ್‌ಗೆ ವರ್ಗಾಯಿಸುವಂತೆ ಕೋರಿ ಆರೋಪಿ ಪರ ವಕೀಲರು ಮೆಮೋ ಸಲ್ಲಿಕೆ ಮಾಡಿದ್ದರೂ ನ್ಯಾಯಪೀಠ ಅಂಗೀಕರಿಸಿಲ್ಲ.

ಸಾಕ್ಷಿಗಳಿಗೆ ಸಮನ್ಸ್ ನೀಡಿ, ಮುಂದಿನ ವಿಚಾರಣೆಯು ಜೂನ್ 13ರಿಂದ 15ರ ಅವಧಿಯಲ್ಲಿ ನಡೆಯಲಿದೆ. ಮೊದಲನೇ ದಿನ ಒಬ್ಬರು ಹಾಗೂ ಉಳಿದ ದಿನಗಳಲ್ಲಿ ತಲಾ ಇಬ್ಬರಂತೆ ಮೂರು ದಿನಗಳ ಕಾಲ 5 ಮಂದಿ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗುವುದು.

About The Author

Leave a Reply