
ಕಾಸರಗೋಡು:ಮನೆಗೆ ಬೆಂಕಿ ತಗಲಿ ಅಪಾರ ಪ್ರಮಾಣದ ನಷ್ಟ ಉಂಟಾದ ಘಟನೆ ಕುಂಬಳೆ ಸಮೀಪದ ಪುತ್ತಿಗೆಯಲ್ಲಿ ಸೋಮವಾರ ಸಂಜೆ ನಡೆದಿದೆ.



ಪುತ್ತಿಗೆ ಪಂಚಾಯತ್ ಸದಸ್ಯೆ ಅನಿತಾಶ್ರೀ ರವರ ಮನೆಗೆ ಬೆಂಕಿ ತಗಲಿದೆ. ಅನುಶ್ರೀ ಹಾಗೂ ಪತಿ ರಾಮ ಕೆಲಸಕ್ಕೆ ತೆರಳಿದ್ದರು, ಘಟನೆ ನಡೆದಾಗ ಮನೆಯಲ್ಲಿ ಯಾರೂ ಇರಲಿಲ್ಲ . ಮನೆಯಲ್ಲಿದ್ದ ಗೃಹೋಪಕರಣ ಗಳು , ವಸ್ತ್ರ ಹಾಗೂ ಇನ್ನಿತರ ಸಾಮಾಗ್ರಿಗಳು ಬೆಂಕಿ ಗೆ ಸುಟ್ಟು ಕರಕಲಾಗಿದೆ.
ಪರಿಸರವಾಸಿಗಳು ಗಮನಿಸಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬಂದಿಗಳು ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು . ಸುಮಾರು ನಾಲ್ಕು ಲಕ್ಷ ರೂ . ಗೂ ಅಧಿಕ ನಷ್ಟ ಅಂದಾಜಿಸಲಾಗಿದೆ. ಘಟನೆ ಗೆ ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗಿದೆ