October 30, 2025
WhatsApp Image 2024-04-21 at 2.54.33 PM

ಹುಬ್ಬಳ್ಳಿ: ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಬಿವಿಬಿ ಕಾಲೇಜು ಆವರಣದಲ್ಲಿ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಎ.೧೮ ರಂದು ಕೊಲೆಯಾಗಿದೆ. ಕೊಲೆ ಆರೋಪಿ ಫಯಾಜ್​ನನ್ನು ಪೊಲೀಸರು ಬಂಧಿಸಿ, ಧಾರವಾಡ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಇರಿಸಿದ್ದಾರೆ.

ಕಾರಾಗೃಹದಲ್ಲಿ ಆರೋಪಿ ಫಯಾಜ್   ಪೊಲೀಸರು ಎದುರು ಕೊಲೆ ಮಾಡಿರುವ ಕೊಲೆ ಮಾಡಿರುವುದನ್ನ ಬಾಯಿಟ್ಟಿದ್ದಾನೆ. ನೇಹಾ ನನ್ನ ಜೊತೆ ಮಾತನಾಡಲ್ಲ ಅಂದಳು, ಅದಕ್ಕೆ ನಾನು ಚಾಕು ಹಾಕಿದೆ ಎಂದು ಫಯಾಜ್​ ಕಾರಾಗೃಹ ಸಿಬ್ಬಂದಿ ಎದುರು ಹೇಳಿದ್ದಾನೆ.

ಘಟನೆ ನಡೆಯುವುದಕ್ಕೂ ಮುಂಚೆಯೇ ಕಾಲೇಜು ಬಿಟ್ಟಿದ್ದೆ. ಒಂದು ವಾರದ ಹಿಂದೆ ಕಾಲೇಜ್​ಗೆ ಹೋಗಿ ನೇಹಾಳನ್ನು ಮಾತನಾಡಿಸಲು ಯತ್ನಿಸಿದೆ. ಆದರೆ ಅವಳು (ನೇಹಾ) ನಿನ್ನ ಜೊತೆ ಮಾತನಾಡಲು ಇಷ್ಟ ಇಲ್ಲ ಅಂತ ಅವೈಡ್ ಮಾಡಿ, ಹೊರಟು ಹೋದಳು.

ಏಪ್ರಿಲ್​ 18 ರಂದು ಅವಳು ಪರೀಕ್ಷೆ ಬರೆಯಲು ಬಿವಿಬಿ ಕಾಲೇಜಿಗೆ ಬಂದಿದ್ದಳು. ನಾನು (ಫಯಾಜ್​) ಮತ್ತೆ ಅಂದು ಕಾಲೇಜಿಗೆ ಹೋದೆ. ಪರೀಕ್ಷೆ ಮುಗಿಯುವವರೆಗೂ ಕಾಯ್ದೆ. ಪರೀಕ್ಷೆ ಮುಗಿದ ಬಳಿಕ ಹೊರಗೆ ಬಂದ ಅವಳನ್ನು ಮಾತನಾಡಿಸಲು ಯತ್ನಿಸಿದೆ. ಆದರೆ ಅವಳು ಮಾತಾಡಲ್ಲ ಅಂದಳು. ಹೀಗಾಗಿ ಅವಳಿಗೆ ಚಾಕುವಿನಿಂದ ಹತ್ತು ಬಾರಿ ಚುಚ್ಚಿದೆ. ಏನಾಗಿದೆ ಅನ್ನೋದು ಗೊತ್ತಿಲ್ಲ, ಅವಳು ಮಾತಾಡಲ್ಲ ಅಂದಳು ನಾನು ಚಾಕು ಹಾಕಿದ್ದೇನೆ ಎಂದು ಕಾರಾಗೃಹ ಸಿಬ್ಬಂದಿ ಎದುರು ಫಯಾಜ್​ ಹೇಳಿದ್ದಾನೆ.

About The Author

Leave a Reply