ಧಾರವಾಡ: ಕಾಲೇಜು ಕ್ಯಾಂಪಸ್‌ನಲ್ಲಿ (College Campus) ನಡೆದ ನೇಹಾ ಹತ್ಯೆ (Neha Murder Case ) ಹುಬ್ಬಳ್ಳಿಯನ್ನೇ (Hubballi) ಬೆಚ್ಚಿಬೀಳಿಸಿದೆ. ಹಾಡಹಗಲೇ ರಕ್ತದೋಕುಳಿ ಹರಿಸಿದ ಆರೋಪಿಗೆ ತಕ್ಕ ಶಿಕ್ಷೆ ಆಗಲೇಬೇಕು ಅನ್ನೋ ಆಗ್ರಹ ಹೆಚ್ಚಾಗ್ತಿವೆ. ಇದು ಲವ್ ಜಿಹಾದ್ (Love Jihad) ಅಂತ ಹಿಂದೂ ಮುಖಂಡರು ಕೆಂಡವಾಗಿದ್ದಾರೆ.
ಇತ್ತ ಫಯಾಸ್ ನೀತ ಕೃತ್ಯವನ್ನ ಮುಸ್ಲಿಂ ಸಮುದಾಯದ (Muslim Community ) ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ. ಆರೋಪಿ ಪರ ಮುಸ್ಲಿಂ ವಕೀಲರು ವಾದ ಮಾಡಲ್ಲ ಅಂತ ಹೇಳಿದ್ದಾರೆ. ಅಲ್ಲದೇ ನೇಹಾ ಹತ್ಯೆ ಖಂಡಿಸಿ ಇಂದು ಮುಸ್ಲಿಂ ಸಮುದಾಯ ಧಾರವಾಡದಲ್ಲಿ (Dharwad) ಅರ್ಧ ದಿನ ಸ್ವಯಂ ಪ್ರೇರಿತ ಬಂದ್‌ಗೆ ಕರೆ ಕೊಟ್ಟಿದೆ.
ಸಿಬಿಐ ತನಿಖೆಗೆ ನಡ್ಡಾ ಆಗ್ರಹ
ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣವನ್ನ ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ. ನಿನ್ನೆ ನೇಹಾ ಮನೆಗೆ ಭೇಟಿ ಕೊಟ್ಟ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ನೇಹಾ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಿದರು. ಬಳಿಕ ಮಾತ್ನಾಡಿದ ಅವರು, ರಾಜ್ಯ ಪೊಲೀಸರ ಮೇಲೆ ಭರವಸೆ ಇಲ್ಲ. ತನಿಖೆಯ ಹಾದಿ ಬದಲಾಗ್ತಿದೆ. ಸಿಬಿಐನಿಂದ ತನಿಖೆ ಆಗ್ಬೇಕು ಅಂತ ಆಗ್ರಹಿಸಿದ್ದಾರೆ.