
ನವಂಬರ್ 02, 2022 ರಂದು ವಿಟ್ಲ ಪೊಲೀಸ್ ಠಾಣೆಯಲ್ಲಿ ಸಂಶೀರ್ ಯಾನೆ ಚಬ್ಬಿ ಎನ್ನುವ ಆರೋಪಿ ವಿರುದ್ಧ ಪೊಕ್ಸೊ ಪ್ರಕರಣ ದಾಖಲಾಗಿತ್ತು.. ಅಪ್ರಾಪ್ತ ಯುವತಿ ತನ್ನ ಮೇಲೆ ಎರಡು ಬಾರಿ ಬಲಾತ್ಕಾರವಾಗಿ ಅತ್ಯಾಚಾರ ಮಾಡಿದ ಎಂದು ನೀಡಿದ ದೂರಿನ ಪ್ರಕಾರ ಪೊಕ್ಸೊ ಪ್ರಕರಣ ದಾಖಲಾಗುತ್ತದೆ.
ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡ ಮಾನ್ಯ ಎರಡನೇ ಹೆಚ್ಚುವರಿ ಪೋಸ್ಕೋ ತ್ವರಿತ ನ್ಯಾಯಾಲಯ ಮಂಗಳೂರು ಸಾಕ್ಷಿಗಳ ವಿಚಾರಣೆಗಳು ನಡೆಸಿ ಮಾನ್ಯ ನ್ಯಾಯಾಧೀಶರಾದ ಶ್ರೀಮತಿ ಮಂಜುಳಾ ಇಟ್ಟಿ ಇವರು ಆರೋಪವನ್ನು ಸಾಬೀತುಪಡಿಸುವಲ್ಲಿ ವಿಫಲವಾಗಿವೆ ಎಂದು ಆರೋಪಿಯನ್ನು ಬಿಡುಗಡೆ ಮಾಡಿ ಏಪ್ರಿಲ್ 20ರಂದು ಶನಿವಾರ ಆದೇಶ ಹೊರಡಿಸಿರುತ್ತಾರೆ, ಆರೋಪಿಯ ಪರ ಮಂಗಳೂರಿನ ಲೆಕ್ಸ್ ಜೂರಿಸ್ ಲಾ ಚೇಂಬರಿನ ಯುವ ವಕೀಲರಾದ ಆಸಿಫ್ ಬೈಕಾಡಿ, ಮಹಮ್ಮದ್ ಅಸ್ಗರ್ ಮುಡಿಪು, ಇರ್ಷಾದ್ ಸಖಾಫಿ, ಮೊಹಮ್ಮದ್ ಆದಿಲ್, ಮುಹಮ್ಮದ್ ರಿಫಾಝ್ , ಅಶ್ವಿನಿ, ವಾದವನ್ನು ಮಂಡಿಸಿರುತ್ತಾರೆ.


