Visitors have accessed this post 497 times.
ಕಾಸರಗೋಡು: ಅತೀ ವೇಗದಿಂದಾಗಿ ಖಾಸಗಿ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಪಲ್ಟಿ ಹೊಡೆದ ಘಟನೆ ಕಾಸರಗೋಡು ನಗರ ಹೊರವಲಯದ ವಿದ್ಯಾನಗರದಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ. ಕಣ್ಣೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಖಾಸಗಿ ಬಸ್ ಮುಂದಿನಿಂದ ಸಾಗುತ್ತಿದ್ದ ಇನ್ನೊಂದು ಬಸ್ಸನ್ನು ಓವರ್ ಟೆಕ್ ಮಾಡುವ ಭರದಲ್ಲಿ ನಿಯಂತ್ರಣ ತಪ್ಪಿ ರಸ್ತೆ ಮಧ್ಯೆ ಮಗುಚಿ ಬಿದ್ದಿದೆ. ಬಸ್ಸಿನಲ್ಲಿ ಬೆರಳಣಿಕೆಯಷ್ಟೇ ಪ್ರಯಾಣಿಕರಿದ್ದ ಕಾರಣ ಭಾರೀ ಅನಾಹುತ ತಪ್ಪಿದೆ. ಇನ್ನು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ನೀಲೇಶ್ವರದ ರೇಶ್ಮಾ, ಪವಿತ್ರ , ಕಲ್ಯೊಟ್ ನ ಕಮಲಾಕ್ಷ, ಪ್ರಭಾಕರ ಮ್ ಪೆರಿಯದ ಗೋಕುಲ್ ರಾಜ್, ಸರಿನಾ, ಮೇಘ, ಕೃಷ್ಣ ಗಾಯಗೊಂಡಿದ್ದು, ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಿಂದಾಗಿ ರಸ್ತೆಯಲ್ಲಿ ಸಂಚಾರ ಕೆಲ ಸಮಯ ಅಸ್ತವ್ಯಸ್ಥ ಗೊಂಡಿತ್ತು. ಬಸ್ಸಿನಲ್ಲಿ ಸಿಲುಕಿದ್ದವರನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು, ನಾಗರಿಕರು ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಖಾಸಗಿ ಬಸ್ಸುಗಳ ಅತೀವೇಗಕ್ಕೆ ಕಡಿವಾಣ ಹಾಕೇಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಬಸ್ ಚಾಲಕನ ಅತೀ ವೇಗ ಹಾಗೂ ನಿರ್ಲಕ್ಷದ ಚಾಲನೆ ಅಪಘಾತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇನ್ನು ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.Related Posts
ಮಂಗಳೂರು: ಇಎಸ್ಐ ಆಸ್ಪತ್ರೆ ಮೇಲ್ದರ್ಜೆಗೇರಿಸಲು ನಳಿನ್ ಕುಮಾರ್ ಕಟೀಲ್ ಮನವಿ
Visitors have accessed this post 230 times.
ಮಂಗಳೂರು: ಮಂಗಳೂರಿನಲ್ಲಿರುವ ಇಎಸ್ಐ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವಂತೆ ಕೇಂದ್ರ ಕಾರ್ಮಿಕ ಸಚಿವರಾದ ಭೋಪೇಂದ್ರ ಯಾದವ್ ರವರನ್ನು ಇಂದು ನಳಿನ್ ಕುಮಾರ್ ಕಟೀಲ್ ರವರು ನವದೆಹಲಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದರು. ಜಿಲ್ಲೆಯ ಶ್ರಮಿಕ ವರ್ಗಕ್ಕೆ ಅನುಕೂಲವಾಗುವಂತೆ, ಮಂಗಳೂರು ಇಎಸ್ಐ ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಅತ್ಯಾದುನಿಕ ವೈದ್ಯಕೀಯ ಉಪಕರಣಗಳು, ಎಂ.ಆರ್.ಐ. ಘಟಕ, ಸಿ.ಟಿ. ಸ್ಕಾನಿಂಗ್ ಯಂತ್ರಗಳ ಅಳವಡಿಕೆ, ತಜ್ಞ ವೈದ್ಯರ ಹಾಗೂ ಇತರೆ ಸಿಬ್ಬಂದಿಗಳ ನೇಮಕಾತಿಯೊಂದಿಗೆ ವಿವಿಧ ವಿಶೇಷ ವೈದ್ಯಕೀಯ ಸೇವೆಗಳು ದೊರೆಯುವಂತಾಗಲು ಇಎಸ್ ಐ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕೆಂದು ಮಾನ್ಯ ಸಚಿವರಲ್ಲಿ ದಕ್ಷಿಣ ಕನ್ನಡ ಸಂಸದರಾದ ನಳಿನ್ ಕುಮಾರ್ ಕಟೀಲ್ ರವರು ಮನವಿ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿದ ಮಾನ್ಯ ಸಚಿವರು ಈ ಬಗ್ಗೆ ಪರಿಶೀಲಿಸಿ ಸೂಕ್ತ ನಿರ್ಧಾರ…
ಮಂಗಳೂರು: ಮಾದಕ ವಸ್ತು ‘ಎಂಡಿಎಂಎ’ ಮಾರಾಟ ಮಾಡುತ್ತಿದ್ದ ಮಡಿಕೇರಿ ಮೂಲದ ಮೂವರ ಬಂಧನ
Visitors have accessed this post 745 times.
ಮಂಗಳೂರು : ಮಾದಕ ವಸ್ತು ‘ಎಂಡಿಎಂಎ’ ಮಾರಾಟ ಮಾಡುತ್ತಿದ್ದ ಮಡಿಕೇರಿ ಮೂಲದ ಮೂವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 95 ಸಾವಿರ ರೂ. ಮೌಲ್ಯದ ಸೊತ್ತುಗಳನ್ನು…
ಪುತ್ತೂರು: ಕೊಂಬೆಟ್ಟು ಶಾಲಾ ಮುಸ್ಲಿಂ ವಿದ್ಯಾರ್ಥಿನಿಗೆ ಯುವಕನಿಂದ ಚೂರಿ ಇರಿತ ಪ್ರಕರಣ- ಆರೋಪಿ ವಿಧ್ಯಾರ್ಥಿಯನ್ನು ಬಂಧಿಸಲು ಹನೀಫ್ ಪುಂಚತ್ತಾರ್ ಆಗ್ರಹ..!!
Visitors have accessed this post 370 times.
ಪುತ್ತೂರು: ಇಂದು ಕೊಂಬೆಟ್ಟು ಶಾಲಾ ಮುಸ್ಲಿಂ ವಿದ್ಯಾರ್ಥಿನಿಗೆ ಅನ್ಯ ಕೋಮಿನ ಯುವಕನಿಂದ ಚೂರಿ ಇರಿತ ಪ್ರಕರಣ ನಡೆದಿದ್ದು ತಕ್ಷಣ ಆರೋಪಿಯನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು…