August 30, 2025
WhatsApp Image 2024-04-23 at 12.27.57 PM

ಕಾಸರಗೋಡು: ಮನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಉಂಟಾಗಿ ಅಪಾರ ನಷ್ಟಗಳಾದ ಘಟನೆ ಪೆರ್ಲ ಸಮೀಪದ ಶೇಣಿ ಬಾರೆದಳ ಎಂಬಲ್ಲಿ ನಡೆದಿದೆ. ಬಟ್ಯ ನಾಯ್ಕ ಎಂಬವರ ಹೆಂಚು ಹಾಸಿದ ಮನೆಯಲ್ಲಿ ಸೋಮವಾರ ಮಧ್ಯಾಹ್ನ ಬೆಂಕಿ ಹಿಡಿದು ಅಪಾರ ನಾಶ ನಷ್ಟ ಉಂಟಾಗಿದೆ. ಘಟನೆ ನಡೆದಾಗ ಬಟ್ಯ ನಾಯ್ಕ ಮತ್ತು ಮಗನ ಇಬ್ಬರು ಮಕ್ಕಳು ಮನೆಯಲ್ಲಿದ್ದರು. ಹೊರಗಡೆ ಓಡಿದ ಕಾರಣ ಪ್ರಾಣಹಾನಿ ಸಂಭವಿಸಿಲ್ಲ ಪತ್ನಿ ಸಮೀಪದ ಹಾಲಿನ ಡೈರಿಗೆ ತೆರಳಿದ್ದು, ಈ ಸಂದರ್ಭದಲ್ಲಿ ಅಡುಗೆ ಕೋಣೆ ಯಿಂದ ಬೆಂಕಿ ತಗಲಿರುವುದಾಗಿ ಶಂಕಿಸಲಾಗಿದೆ. ಮನೆಯೊಳಗಿದ್ದ ಬೆಲೆ ಬಾಳುವ ವಸ್ತು, ನಗದು, ದಾಖಲೆ ಗಳು, ಇಲೆಕ್ಟ್ರಾನಿಕ್ಸ್ ಉಪಕರಣ ಗಳು ಬೆಂಕಿಗೆ ಆಹುತಿಯಾಗಿದೆ. ಬೆಂಕಿಯ ತೀವ್ರತೆಗೆ ಮನೆಯ ಗೋಡೆಗಳು ಬಿರುಕು ಬಿಟ್ಟಿದೆ. ಕಾಸರಗೋಡಿನಿಂದ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿ ಹೆಚ್ಚಿನ ಅಪಾಯ ತಪ್ಪಿಸಿದರು. ಎಣ್ಮಕಜೆ ಗ್ರಾಮ ಪಂಚಾಯತ್‌ ಅಧ್ಯಕ್ಷ ಸೋಮಶೇಖರ್ ಸ್ಥಳಕ್ಕೆ ಆಗಮಿಸಿ ಸ್ಥಳೀಯರೊಂದಿಗೆ ಸೇರಿಕೊಂಡು ಮನೆಯವರಿಗೆ ವಾಸಿಸಲು ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಿದ್ದಾರೆ.

About The Author

Leave a Reply