Visitors have accessed this post 558 times.

ನೇಹಾ ಹಿರೇಮಠ ಕೇಸ್ ಆರೋಪಿಗೆ ಗಲ್ಲು ಶಿಕ್ಷೆ ಕೊಡಿಸ್ತೇವೆ -ಸುರ್ಜೇವಾಲಾ

Visitors have accessed this post 558 times.

ಬೆಂಗಳೂರು: ಹುಬ್ಬಳ್ಳಿ ಖಾಸಗಿ ಕಾಲೇಜು ಕ್ಯಾಂಪಸ್​ನಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರನ್ನು ಬರ್ಬರ ಹತ್ಯೆಗೈದಿರುವ ಆರೋಪಿಗೆ ಅತ್ಯಂತ ಕಠಿಣ, ಗಲ್ಲು ಶಿಕ್ಷೆ ಕೊಡಿಸೋದಕ್ಕೆ ಪ್ರಯತ್ನ ಮಾಡ್ತೇವೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ.

ಸಂದರ್ಶನದಲ್ಲಿ ಮಾತನಾಡಿರುವ ಸುರ್ಜೇವಾಲಾ, ನೇಹಾ ಕೊಲೆ ಪ್ರಕರಣದ ವಿಚಾರಣೆಗೆ ವಿಶೇಷ ಕೋರ್ಟ್ ಸ್ಥಾಪನೆ ಬಗ್ಗೆ ಸಿಎಂ ನನಗೆ ತಿಳಿಸಿದ್ದಾರೆ. ಮುಂದಿನ 90-120 ದಿನಗಳ ಒಳಗೆ ವಿಚಾರಣೆ ಮುಗಿಸೋಕೆ ಮನವಿ ಮಾಡುತ್ತೇವೆ. ಅತ್ಯಂತ ಕಠಿಣ, ಗಲ್ಲು ಶಿಕ್ಷೆ ಕೊಡಿಸೋದಕ್ಕೆ ಪ್ರಯತ್ನ ಮಾಡ್ತೇವೆ. ನೇಹಾ ಕರ್ನಾಟಕದ ಮಗಳು, ನನಗೂ ಮಗಳು ಇದ್ದಂತೆ. ಪ್ರಕರಣದಲ್ಲಿ ಯಾವುದೇ ರಾಜಕಾರಣವನ್ನ ಮಾಡೋದಿಲ್ಲ ಎಂದಿದ್ದಾರೆ.

ಏನೂ ಮಾಡದೇ ಇರುವವರು ತಲೆಬುಡವಿಲ್ಲದ ಮಾತಾಡ್ತಾರೆ. ನೇಹಾ ಕರ್ನಾಟಕದ ಮಗಳಾಗಿದ್ದಳು, ನಮಗೂ ಆಕೆ ಮಗಳೇ. ನೇಹಾ ಕೇಸ್​ನಲ್ಲಿ ನಾವು ಮೂರು ನಿರ್ಧಾರ ತಗೊಂಡಿದ್ದೀವಿ. ಕೃತ್ಯ ನಡೆದ ತಕ್ಷಣವೇ ಆರೋಪಿಯನ್ನ ಹಿಡಿದು ಜೈಲಿಗೆ ಹಾಕಲಾಗಿದೆ. ನೇಹಾ ಪ್ರಕರಣದ ವಿಚಾರಣೆಗೆ ವಿಶೇಷ ನ್ಯಾಯಾಲಯ ರಚಿಸ್ತೇವೆ. 90 ರಿಂದ 120 ದಿನದ ಒಳಗೆ ವಿಚಾರಣೆ ಮುಗಿಸುವಂತೆ ಕೋರ್ಟ್​ಗೆ ಮನವಿ. ನೇಹಾಳನ್ನ ಕೊಂದ ಕ್ರಿಮಿನಲ್‌ಗೆ ಅತ್ಯಂತ ಕಠಿಣ ಶಿಕ್ಷೆಗೆ ಮನವಿ ಮಾಡ್ತೀವಿ. ಕೋರ್ಟ್‌ಗೆ ಮನವಿ ಮಾಡಿ ಆತನಿಗೆ ಗಲ್ಲು ಶಿಕ್ಷೆಯನ್ನ ಕೊಡಿಸ್ತೀವಿ ಎಂಬ ಭರವಸೆ ನೀಡಿದ್ದಾರೆ.

Leave a Reply

Your email address will not be published. Required fields are marked *