
ಬೆಂಗಳೂರು: ನಗರದಲ್ಲಿ ಆಂಬುಲೆನ್ಸ್ ಚಾಲಕನ ಯಡವಟ್ಟಿನಿಂದಾಗಿ ಸರಣಿ ಅಪಘಾತ ನಡೆದು, ಕಾರುಗಳು ಜಖಂಗೊಂಡಿರುವಂತ ಘಟನೆ ನಡೆದಿದೆ.



ಆಂಬುಲೆನ್ಸ್ ಚಾಲಕ ಬ್ರೇಕ್ ಬದಲು ಆಸ್ಸಿಲೇಟರ್ ಒತ್ತಿದ ಪರಿಣಾಮ ಸರಣಿ ಅಪಘಾತ ನಡೆದು, ಮೂರು ಕಾರು, ಬೈಕ್ ಜಖಂ ಗೊಂಡಿದ್ದಾವೆ. ಈ ಸರಣಿ ಅಪಘಾತದಲ್ಲಿ ಬೈಕ್ ಸವಾರನ ಕಾಲಿಗೆ ಗಾಯವಾಗಿದ್ದರೇ, ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದೆ.
ಮಾರ್ಕೆಟ್ ನಿಂದ ಗುಡ್ಡದಹಳ್ಳಿ ಮಾರ್ಗವಾಗಿ ಆಂಬುಲೆನ್ಸ್ ಚಾಲಕ ಸುಮಂತ್ ಬರುತ್ತಿದ್ದರು, ಈ ವೇಳೆಯಲ್ಲಿ ನಿಯಂತ್ರಣ ಸಿಗದೇ ಕಾರಿಗೆ ಡಿಕ್ಕಿ ಹೊಡೆ ಪರಿಣಾಮ ಈ ಅಪಘಾತ ಸಂಭವಿಸಿದೆ.
ಇದಷ್ಟೇ ಅಲ್ಲದೇ ಸರಣಿ ಅಪಘಾತದ ನಂತ್ರ ಟೆನ್ಷನ್ನಲ್ಲಿ ಆಂಬುಲೆನ್ಸ್ ಚಾಲಕ ಸುಮಂತ್ ಬ್ರೇಕ್ ಬದಲು ಎಕ್ಸಲೇಟರ್ ಕೊಟ್ಟ ಪರಿಣಾಮ ಸರಣಿ ಅಪಘಾತಕ್ಕೂ ಕಾರಣವಾಗಿದೆ. ಕಾರಿನಲ್ಲಿದ್ದಂತ ನಾಲ್ಕು ತಿಂಗಳ ಗರ್ಭಿಣಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.